Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮವಾಗಿ ಗೋ ಸಾಗಾಟ: ಆರೋಪಿಗಳು ಪರಾರಿ

ಕುಂದಾಪುರ: ತಾಲೂಕಿನ ಕಂಡ್ಲೂರು ಚೆಕ್‌ಪೋಸ್ಟ್‌ ಬಳಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಗೋವುವನ್ನು ಸಾಗಿಸುತ್ತಿದ್ದ ವೇಳೆ, ಓಮ್ನಿಯನ್ನು ಬೆನ್ನಟ್ಟಿದ ಪೊಲೀಸರು ಗೋವು ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ವಾಹನ ನಿಲ್ಲಿಸಿ ಪರಾರಿಯಾಗಿದ್ದಾರೆ.

ಸೌಕೂರು ಕಡೆಯಿಂದ ಕಂಡ್ಲೂರು ಕಡೆಗೆ ಗೋವುವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಓಮ್ನಿಯನ್ನು ಅಡ್ಡಗಟ್ಟಿದರೂ ನಿಲ್ಲಿಸದೇ ಮುಂದೆ ಹೋದಾಗ ಓಮ್ನಿಯನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಸ್ವಲ್ಪ ದೂರು ವಾಹನ ಚಲಾಯಿಸಿದ ಆರೋಪಿಗಳು ಬಳಿಕ ರಸ್ತೆಯ ಬದಿಯಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ.

ಓಮ್ನಿಯಲ್ಲಿ ದನವನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ಕಸಾಯಿಖಾನೆಗೆ ಕೊಂಡೊಯ್ಯಲು ಕದ್ದು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ವಶಪಡಿಸಿಕೊಂಡ ಜಾನುವಾರು ಹಾಗೂ ವಾಹನವನ್ನು ಠಾಣೆಗೆ ತರಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

illegal cattle carry3

Exit mobile version