Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ವಲಯ ಸಾಂಸ್ಕೃತಿಕ ಕಾರ್ಯಕ್ರಮ: ಬೈಂದೂರು ರೋಟರಿಗೆ ಸಮಗ್ರ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರೋಟರಿ ವಲಯ 1ರ ಸಾಂಸ್ಕೃತಿಕ ಕಾರ್ಯಕ್ರಮ ‘ಕುಂದ ಕಲಾ ವೈಭವ’ ಅಂಗವಾಗಿ ಕುಂದಾಪುರ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆದ ಸ್ಪರ್ಧೆಯಲ್ಲಿ ಬೈಂದೂರು ರೋಟರಿ ಒಟ್ಟು 7 ಪ್ರಶಸ್ತಿ (3 ಪ್ರಥಮ ಹಾಗೂ 4 ದ್ವಿತೀಯ) ಗಳಿಸುವ ಮೂಲಕ ಸಮಗ್ರ ವಲಯ ಚಾಂಪಿಯನ್‌ಶಿಫ್‌ಗೆ ಅರ್ಹ ತಂಡವಾಗಿ ಮೂಡಿಬಂದಿದೆ.

ಈ ಪ್ರಶಸ್ತಿಯನ್ನು ರೋಟರಿ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಇವರಿಗೆ ಜಿಲ್ಲಾ ರೆಡ್‌ಕ್ರಾಸ್‌ನ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಹಸ್ತಾಂತರಿಸಿದರು. ವಲಯ ಸಹಾಯಕ ಗವರ್ನರ್ ಜೆ. ಪಿ. ಶೆಟ್ಟಿ, ವಲಯ ಸೇನಾನಿ ಡಾ. ರಾಜಾರಾಮ ಶೆಟ್ಟಿ ಹಾಗೂ ಎಲ್ಲಾ ರೋಟರಿ ಪದಾಧಿಕಾರಿಗಳು ಇದ್ದರು.

Exit mobile version