Kundapra.com ಕುಂದಾಪ್ರ ಡಾಟ್ ಕಾಂ

ವಕ್ವಾಡಿ: ಆಯುರ್ವೇದ ಆರೋಗ್ಯ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಾಗರ ಸಿದ್ಧಿವಿನಾಯಕ ವುಡ್ ಇಂಡಸ್ಟ್ರೀಸ್ ಮತ್ತು ಆಶಾವಾಣಿ ಟ್ರಸ್ಟ್ ರಿ. ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕುಂದಾಪುರ ಸ್ವಾತಿ ಕ್ಲಿನಿಕ್‌ನ ಡಾ. ಶ್ರೀಪತಿ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಗರ ಸಿದ್ಧಿ ವಿನಾಯಕ ವುಡ್ ಇಂಡಸ್ಟ್ರೀಸ್ ಮಾಲಕ ಗಣೇಶ್ ಆಚಾರ್ಯ, ವಕ್ವಾಡಿ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಆನಂದ ಆಚಾರ್ಯ, ಸದ್ಗುರು ಆಯುರ್ವೇದ ಸಂಸ್ಥೆಯ ಗಣೇಶ್ ಶೆಟ್ಟಿ, ಸಾಲಿಗ್ರಾಮ ಆಶಾವಾಣಿ ಟ್ರಸ್ಟ್‌ನ ಟ್ರಸ್ಟಿಗಳಾದ ಡಾ. ವಾಣಿಶ್ರೀ ಐತಾಳ್, ಆಶಾ ಹೆಗ್ಡೆ ಉಪಸ್ಥಿತರಿದ್ದರು.

ಆರೋಗ್ಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಸುಮಾರು 100 ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗಿಯಾಗುವುದರ ಮೂಲಕ ಉಚಿತ ಆರೋಗ್ಯ ಶಿಬಿರ ಪ್ರಯೋಜನ ಪಡೆದರು.

Exit mobile version