Kundapra.com ಕುಂದಾಪ್ರ ಡಾಟ್ ಕಾಂ

ವಿಧಾನ ಪರಿಷತ್ ಚುನಾವಣೆ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಜನಪ್ರತಿನಿಧಿಗಳ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ತಾಂತ್ರಿಕವಾಗಿ ಗೆಲುವು ಸಾಧ್ಯವಿದ್ದರೂ ತಲೆಯೆತ್ತಿ ನಿಲ್ಲುವ ಗೆಲುವು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ನ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹೇಳಿದರು.

ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಕುಂದಾಪುರ ಸೋಮವಾರ ಆಯೋಜಿಸಿದ್ದ ಮತದಾರರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ 6 ಸಾವಿರ ಮತಗಳಿವೆ. ಬಿಜೆಪಿ ಬೆಂಬಲಿತ ಸ್ಥಳೀಯ ಪ್ರತಿನಿಧಿಗಳು 3,600 ಇದ್ದಾರೆ. ಕಾಂಗ್ರೆಸ್ ಪಕ್ಷ ಮತ ಹೊಂದಿದೆ. ಎಸ್ಡಿಪಿಐಗೆ 200 ಮತ ಇದೆ. 6 ಸಾವಿರದಲ್ಲಿ 2 ಸಾವಿರ ಮತ ಗೆದ್ದವರು ವಿಜಯ ಸಾಧಿಸಿದಂತೆ, 2 ಸಾವಿರಕ್ಕಿಂತ ಕಡಿಮೆಯಾದಲ್ಲಿ ಪ್ರಿಪರೆನ್ಸಿಯಲ್ ಸಿಸ್ಟಮ್ನಡಿ ಆಯ್ಕೆ ನಡೆಯುತ್ತದೆ. ತಾಂತ್ರಿಕವಾಗಿ ನಮಗೆ ಗೆಲುವು ಆಗಲಿದ್ದರೂ, ಪಕ್ಷೇತರ 27 ಮತಗಳು ಸಹಿತ ಕಾಂಗ್ರೆಸ್ನಲ್ಲಿ ಹಿಂದೆ ಸಾಕಷ್ಟು ಬೆಳೆದು, ಬಳಿಕ ಕಾರಣಾಂತರ ದಿಂದ ಅನ್ಯಪಕ್ಷದಲ್ಲಿರು ವವರ ಮನವೊಲಿಸಿ ಮತ ಪಡೆಯುವ ಮೂಲಕ ತಲೆಯೆತ್ತುವ ಗೆಲುವು ನಮ್ಮದಾಗಬೇಕಾಗಿದೆ ಎಂದರು.

ಪ್ರತಾಪ್ಚಂದ್ರ ಶೆಟ್ಟಿ ಮಾರ್ಗದರ್ಶನ:
ಈ ಬಾರಿ ಪ್ರತಾಪ್ಚಂದ್ರ ಶೆಟ್ಟಿಯವರು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ತಿಳಿಸಿದ ಮೇರೆಗೆ ಅವರ ಸಲಹೆಯಂತೆ ಸ್ಪರ್ಧಾ ಕಣದಲ್ಲಿದ್ದೇನೆ. ಅವರ ಮಾರ್ಗದರ್ಶನದಡಿ ಪಕ್ಷ ಸಂಘಟನೆ ಮಾಡಲು ಉತ್ಸುಕನಾಗಿದ್ದೇನೆ ಎಂದು ನುಡಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಕೆಪಿಸಿಸಿ ಸಂಯೋಜಕಿ ಮಮತಾ ಗಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ ಕೆದೂರು ಸದಾನಂದ ಶೆಟ್ಟಿ, ವಿಕಾಸ್ ಹೆಗ್ಡೆ ಮಾತನಾಡಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅದ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ ಹಿರಿಯ ಮುಖಂಡರಾದ ಬಿ. ಹೆರಿಯಣ್ಣ, ಕೃಷ್ಣದೇವ ಕಾರಂತ, ಬಿ.ಸತೀಶ್ ಕಿಣಿ ದೇವಕಿ ಸಣ್ಣಯ್ಯ, ಶ್ಯಾಮಲಾ ಭಂಡಾರಿ, ನವೀನ್ ಡಿಸೋಜ, ಕೊಳೆಬೈಲು ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ವಿನೋದ್ ಕ್ರಾಸ್ತಾ ನಿರೂಪಿಸಿದರು.

Exit mobile version