ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಮೂಲದ 1.6 ವರ್ಷದ ಪೋರಿ ಅಗಮ್ಯ ಎಂ. ಶೆಟ್ಟಿ ತನ್ನ ವಿಶೇಷ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಯಾಗಿದ್ದಾರೆ.
ಅಗಮ್ಯ, ಮಹಾಭಾರತದ ಪ್ರಮುಖ 5 ಪಾತ್ರದಾರಿಗಳ ಅನುಕರಣೆ ಮಾಡುವುದಲ್ಲದೇ ಭಾವನಾತ್ಮಕವಾಗಿ ಅಭಿನಯಿಸು ತ್ತಾಳೆ. 7 ಬಗೆಯ ಪ್ರಾಣಿಗಳ ಧ್ವನಿಯನ್ನು ಅನುಕರಿಸುತ್ತಾಳೆ, ಆರು ಬಗೆಯ ಧಾನ್ಯ ಗಳನ್ನು ಗುರುತಿಸುತ್ತಾಳೆ, 14 ಪ್ರಾಣಿಗಳನ್ನು ಗುರುತಿಸುತ್ತಾಳೆ, ದೇಹದ ಎಂಟು. ಭಾಗಗಳನ್ನು ಗುರುತಿಸುತ್ತಾಳೆ, 20ಕ್ಕೂ ಹೆಚ್ಚು ಗೃಹಬಳಕೆ ವಸ್ತುಗಳನ್ನು ಗುರುತಿಸುವ ಮೂಲಕ ಕಿರಿಯ ವಯಸ್ಸಿನಲ್ಲಿ ಇಂಡಿಯಾ ಆಫ್ ರೆಕಾರ್ಡ್‌ಗೆ ಬುಕ್ ಸೇರ್ಪಡೆಯಾಗಿದ್ದಾಳೆ. ಬಾಲಕಿ ಉಪ್ಪುಂದ ನಿವಾಸಿ, ಶಹಾಪುರದ ಉದ್ಯಮಿ ಗುರುದತ್ತ ಶೆಟ್ಟಿ ಹಾಗೂ ಮಮತಾ ಶೆಟ್ಟಿ ದಂಪತಿಯ ಪುತ್ರಿ.