Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ: ಸುಮನಾ ಸುಧಾಕರ್ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 67 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಸುಮನಾ ಸುಧಾಕರ್ ಆಚಾರ್, ತ್ರಾಸಿ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.ನಿವೃತ್ತ ಶಿಕ್ಷಕ ಸದಾಶಿವ ಐತಾಳ್, ವಾಸುದೇವ ಶ್ಯಾನುಭಾಗ್ ಕುಂದಾಪುರ, ದೇವಕಿ ಪ್ರಭು ತಲ್ಲೂರು, ನಾಗರಾಜ ಆಚಾರ್ ತ್ರಾಸಿ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು.

ಶ್ರೀ ರಾಮ ಗಣಪತಿ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ, ತ್ರಾಸಿ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿದರು, ಪ್ರಭಾಕರ್ ಆಚಾರ್ ಸಹಕರಿಸಿದರು.

Exit mobile version