Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಯುವ ಬಂಟರ ವೇದಿಕೆಯಿಂದ ಬಾಲಕಿ ಆಗಮ್ಯ ಎಂ. ಶೆಟ್ಟಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಯುವ ಬಂಟರ ವೇದಿಕೆ ವತಿಯಿಂದ ಇಂಡಿಯ ಬುಕ್ ಅಫ್ ರೆಕಾರ್ಡ್ ಸೇರ್ಪಡೆಯಾದ ಬಾಲಕಿ ಆಗಮ್ಯ ಎಂ. ಶೆಟ್ಟಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯುವ ಬಂಟರ ವೇದಿಕೆಯ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಗಂಟೆಹೊಳೆ ಕಂಬದಕೋಣೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಹಳಗೇರಿ ಯುವ ಬಂಟರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರೀಕಟ್ಟೆ, ಬಾಲಕಿಯ ತಂದೆ ಗುರುದತ್ ಶೆಟ್ಟಿ ಮತ್ತು ತಾಯಿ ಮಮತಾ ಶೆಟ್ಟಿ ಯುವ ಬಂಟರ ವೇದಿಕೆಯ ಪದಾಧಿಕಾರಿ ಶಿವರಾಜ್ ಶೆಟ್ಟಿ ಹುಂಚನಿ, ಜೊತೆ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ ಹಳಗೇರಿ, ಕ್ರೀಡಾ ಕಾರ್ಯದರ್ಶಿ ಕೀರ್ತಿರಾಜ್ ಶೆಟ್ಟಿ ಖಜಾಂಜಿ ರವೀಂದ್ರ ಶೆಟ್ಟಿ ಉಪ್ಪುಂದ ಪದಾಧಿಕಾರಿಗಳಾದ ನವೀನ್ ಶೆಟ್ಟಿ ಶ್ರೀಕಾಂತ್ ಶೆಟ್ಟಿ ಪವನ್ ಶೆಟ್ಟಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಒಂದುವರೆ ವರ್ಷದ ಬಾಲಕಿ ಅಗಮ್ಯ ಎಂ. ಶೆಟ್ಟಿ ತನ್ನ ಅತಿ ಕಿರಿಯ ವಯಸ್ಸಿನಲ್ಲಿ ತನ್ನ ವಿಶೇಷ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯ ಮೂಲಕ ಇಂಡಿಯ ಬುಕ್ ಅಫ್ ರೆಕಾರ್ಡ್ ಸೇರ್ಪಡೆ ಆಗಿದ್ದರು.

ದನ್ನೂ ಓದಿ:
► ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಉಪ್ಪುಂದದ ಅಗಮ್ಯ ಎಂ.ಶೆಟ್ಟಿ ಸೇರ್ಪಡೆ – https://kundapraa.com/?p=55609 .

Exit mobile version