Kundapra.com ಕುಂದಾಪ್ರ ಡಾಟ್ ಕಾಂ

ಪುರಾತನ ಚಿಕಿತ್ಸಾ ಪದ್ಧತಿ ಆಯುರ್ವೇದ: ಸ್ಮಿತಕೃಷ್ಣ ದಾಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಯಾವುದೇ ಅಡ್ಡಪರಿಣಾಮವಿಲ್ಲದ ಚಿಕಿತ್ಸೆ ಆಯುರ್ವೇದದಿಂದ ಸಾಧ್ಯ. ಶಾಸ್ತ್ರೀಯವಾಗಿ ಆಯುರ್ವೇದವನ್ನು ಕಲಿಯುವವರು ತಮ್ಮ ವೃತ್ತಿಯನ್ನು ಭಗವಂತನ ಸೇವೆಯೆಂದು ತಿಳಿಯಬೇಕು ಎಂದು ಕುಡುಪುಕಟ್ಟೆ ಇಸ್ಕಾನ್ ಜಗನ್ನಾಥ ಮಂದಿರದ ಅಧ್ಯಕ್ಷ ಸ್ಮಿತಕೃಷ್ಣ ದಾಸ್ ಹೇಳಿದರು.

ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆಯೋಜಿಸಿದ ಧನ್ವಂತರಿ ಪೂಜಾ ಮಹೋತ್ಸವದಲ್ಲಿ ಮಾತಾನಾಡಿದ ಅವರು, ಆಧುನಿಕ ಕಾಲದ ಔಷಧ ವ್ಯವಸ್ಥೆಗೆ ಸಮಾನವಾಗಿರುವ ಆಯುರ್ವೇದ ಔಷಧವು ಪ್ರಸ್ತುತ ಜಾರಿಯಲ್ಲಿರುವ ಅತ್ಯಂತ ಪುರಾತನ ಪದ್ಧತಿಯಾಗಿದೆ. ಇಂದಿನ ಯುವ ಪೀಳಿಗೆಯಲ್ಲಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದಲ್ಲಿ ಈ ಚಿಕಿತ್ಸಾ ತತ್ವವನ್ನು ಉತ್ತೇಜಿಸಿದಾಗ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮನ್ನಣೆ ಪ್ರಾಪ್ತಿಯಾಗುತ್ತದೆ ಎಂದು ಅವರು ಹೇಳಿದರು.

ನಮ್ಮ ಜೀವನದಲ್ಲಿ ವಿನಯ, ಕೃತಜ್ಞತೆ ಮತ್ತು ದಯಾಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ. ಮೌಲ್ಯಯುತ ಜೀವನ ನಡೆಸಿದಾಗ ಸಂಪತ್ತು, ಪ್ರಸಿದ್ಧಿ ಅಭಿಸುತ್ತದೆ. ಜೀವನದ ಉದ್ದೇಶ ಅರಿತಾಗ ಮಾತ್ರ ಅರ್ಥಪೂರ್ಣ, ಶಾಂತಿಯುತವಾಗಿ ಬಾಳಲು ಸಾಧ್ಯ ಎಂದರು.

ಆಯುರ್ವೇದ ದಿನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜೀತ್ ಎಂ. ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ. ಸಾಜಿತ್ ಎಂ. ಸ್ವಾಗತಿಸಿದರು. ಉಪನ್ಯಾಸಕ ಡಾ. ರವಿ ಪ್ರಸಾದ್ ಹೆಗ್ಡೆ ವಂದಿಸಿದರು. ವಿದ್ಯಾರ್ಥಿ ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು‌.

ಸಭಾ ಕಾರ್ಯಕ್ರಮದ ಮೊದಲು ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜಾ ಮಹೋತ್ಸವ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡರು.

Exit mobile version