Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಭಜನ ಸಂಕೀರ್ತನ ಸಪ್ತಾಹ ಶತಮಾನೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀರಾಮ ಭಜನ ಸಂಕೀರ್ತನೆ ಸಪ್ತಾಹದ ಶತಮಾನೋತ್ಸವಕ್ಕೆ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಬುಧವಾರ ದೀಪ ಪ್ರಜ್ವಲನಗೈದು ಆಶೀರ್ವಚಿಸಿದರು. ಅನಂತರ ಭಜನ ಸಪ್ತಾಹ ಆರಂಭಗೊಂಡಿದ್ದು ಡಿ. 15ರ ವರೆಗೆ ನಡೆಯಲಿದೆ.

ಪ್ರತಿದಿನ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಸಂಗೀತ ಕಲಾವಿದರಿಂದ, ಊರ ಪರವೂರ ಭಜನ ತಂಡಗಳಿಂದ ನಿರಂತರ ಭಜನೆ 7 ದಿನಗಳ ಕಾಲ ನಡೆಯಲಿದೆ. ಭಜನ ಸಪ್ತಾಹ ಶತಮಾನೋತ್ಸವದ ಸಂಭ್ರಮದಿಂದ ನಡೆಸಲು ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಪ್ರಭು, ಕಾರ್ಯದರ್ಶಿ ಎಚ್. ಶಾಂತಾರಾಮ ಪೈ, ಖಜಾಂಚಿ ಕೆ. ಮಧುಸೂದನ್ ಭಟ್, ಮೊಕ್ತಸರ ಕೆ. ಮೋಹನದಾಸ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಭಜನ ಸಪ್ತಾಹದಲ್ಲಿ ಪ್ರತಿದಿನ ಸಾಯಂಕಾಲ 6.30 ರಿಂದ 8ರ ತನಕ ವಿಶೇಷ ಆಹ್ವಾನಿತ ಸಂಗೀತಗಾರರಿಂದ ಭಜನೆ ನಡೆಯುತ್ತಿದೆ.

ವಿಜಯ್ ಕುಮಾರ್ ಪಾಟೀಲ್ ಧಾರವಾಡ, ಅನಂತ ಕುಲಕರ್ಣಿ ಬಾಗಲಕೋಟೆ, ಬಸ್ತಿ ಕವಿತಾ ಶೆಣೈ ಮಂಗಳೂರು, ವೆಂಕಟೇಶ ಹೆಗ್ಡೆ ಮುಂಬಯಿ, ವಿದ್ವಾನ್ ಗಜಾನನ ಹೆಬ್ಬಾರ್ ಭಟ್ಕಳ, ವಿದ್ವಾನ್ ಮಹಾಬಲೇಶ್ವರ ಭಾಗವತ್ ಉಡುಪಿ ಕಾರ್ಯಕ್ರಮ ನೀಡಲಿದ್ದಾರೆ. ರಂದು ರಾತ್ರಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಶೆಣೈ ಪಾರ್ಕ್ನಲ್ಲಿ ಸ್ವಾಗತಿಸಿ ಪೂರ್ಣ ಕುಂಭದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

Exit mobile version