ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕರಾಟೆ ತರಗತಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯೋಪಧ್ಯಾಯರಾದ ಆನಂದ ಮದ್ದೋಡಿ ಅವರು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ವೃದ್ಧಿಸಲು, ಸ್ವಯಂ ರಕ್ಷಣೆಗೂ ಕರಾಟೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಕೆಡಿಎಫ್ ಕರಾಟೆ & ಫಿಟ್’ನೆಸ್ ಅಕಾಡೆಮಿಯ ಸಂಸ್ಥಾಪಕ ಕಿರಣ್ ಕುಂದಾಪುರ, ಕರಾಟೆ ಮಾಸ್ಟರ್ ವಿಶ್ವನಾಥ್ ಉಪ್ಪುಂದ.. ಸಂದೀಪ್, ಶಿಯಾನ್ ಶೇಖ್, ಸಂತೋಷ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ್ ಮಾಕೋಡಿ ಸ್ವಾಗತಿಸಿ, ಚೈತ್ರ ಯಡ್ತರೆ ವಂದಿಸಿದರು, ಗುರುರಾಜ ಎಸ್. ಕಾರ್ಯಕ್ರಮ ನಿರೂಪಿಸಿದರು.