ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ಹರಿಪ್ರಸಾದ್ ಹೊಟೇಲಿನ ಆತಿಥ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಟಾರ್ಪೆಡೊಸ್ ರಶ್ಮೀ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟಿಂಗ್ ಚೆಸ್ ಚಾಂಪಿಯನ್ಷಿಪ್ನಲ್ಲಿ ತಮಿಳುನಾಡಿನ ಚಾಂಪಿಯನ್ ಆಟಗಾರ, ಎಲೋ ರೇಟಿಂಗ್ನಲ್ಲಿನ 2177 ಅಂಕಗಳನ್ನು ಹೊಂದಿರುವ ಮುತ್ತಯ್ಯ ಒಂಬತ್ತು ಸುತ್ತಿನ ಪಂದ್ಯದಲ್ಲಿ 8.5 ಅಂಕಗಳನ್ನು ಗಳಿಸಿ ಅಗ್ರ ಸ್ಥಾನಿಯಾದರು, ಆಕರ್ಷಕ ಟ್ರೋಫಿಯೊಂದಿಗೆ 30,000 ರೂ, ನಗದು ಬಹುಮಾನ ಪಡೆದರು. ಕರ್ನಾಟಕ ವಿವಿಧ ವಿಭಾಗಗಳಲ್ಲಿ ಮೇಲುಗೈ ಸಾಧಿಸಿ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ಅಖಿಲ ಭಾರತ ಫಿಡೆ ರೇಟಿಂಗ್ ಚೆಸ್ ಚಾಂಪಿಯನ್ಷಿಪ್ನಲ್ಲಿ ತಮಿಳುನಾಡಿನ ಐಎಂ ಮುತ್ತಯ್ಯ ಎಎಲ್ ಅವರು ಅಗ್ರ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, 2363 ಎಲೋ ರೇಟಿಂಗ್ ಅಂಕಗಳನ್ನು ಹೊಂದಿರುವ ಕರ್ನಾಟಕದ ಐಎಂ ಮಂಗಳೂರಿನ ವಿಯಾನಿ ಅಂಥೋನಿಯೋ ಡಿʼಕುನ್ಹಾ 8 ಅಂಕಗಳನ್ನು ಗಳಿಸಿ ರನ್ನರ್ಅಪ್ ಗೌರವಕ್ಕೆ ಪಾತ್ರರಾದರು. ಎರಡನೇ ಸ್ಥಾನ ಪಡೆದ ವಿಯಾನಿ 20,000 ರೂ.ಗಳೊಂದಿಗೆ ಆಕರ್ಷಕ ಟ್ರೋಫಿ ಗಳಿಸಿದರು.
ತಮಿಳುನಾಡಿನ ಐಎಂ ಹರಿಕೃಷ್ಣ ಎ.ರಾ. 7.5 ಅಂಕಗಳನ್ನು ಗಳಿಸಿ ಆಕರ್ಷಕ ಟ್ರೋಫಿಯೊಂದಿಗೆ 10,000 ರೂ, ನಗದು ಬಹುಮಾನ ಮತ್ತು ಟ್ರೋಫಿ ಗೆದ್ದರು. ಐಎಂ ರೈಲ್ವೇಸ್ನ ರತ್ನಾಕರ್ ಕೆ. 7.5 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದೊಂದಿಗೆ 8,000 ರೂ, ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು. 7.5 ಅಂಕ ಗಳಿಸಿದ ತಮಿಳುನಾಡಿನ ಗೋಕುಲಕೃಷ್ಣ ಎಸ್. 7,000 ರೂ. ನಗದು ಬಹುಮಾನ ಗಳಿಸಿದರು.
ನಗದು ಬಹುಮಾನ ಮತ್ತು ಟ್ರೋಫಿ ಗಳಿಸಿದ ಅಗ್ರ ಆಟಗಾರರು:
ಮಣಿಕಂಠನ್ ಎಸ್.ಎಸ್.( ತಮಿಳುನಾಡು, ರೂ. 6,000), ಬಾಲಕಿಶನ್ (ಕರ್ನಾಟಕ, ರೂ. 5,000), ಸಂಯುಕ್ತ ಸಿ,ಎಂ.ಎನ್, (ತಮಿಳುನಾಡು, ರೂ.4,000), ರಾಮನಾಥನ್ ಬಾಲಸುಬ್ರಹ್ಮಣ್ಯಂ (ತಮಿಳುನಾಡು, ರೂ. 3,500), ವಿರಾಜ್ ಪ್ರಭಾಕರ್ ಶೆಟ್ಟಿ (ಕರ್ನಾಟಕ, ರೂ. 3,000), ಮಂದಾರ ಮೋಹನ್ ಸಾನೆ (ಮಹಾರಾಷ್ಟ್ರ, ರೂ. 2,500), ಶ್ಯಾಮ್ ನಿಖಿಲ್ ಪಿ (ಐಸಿಎಫ್, ರೂ. 2,500), ರಾಮಚಂದ್ರ ಭಟ್ (ಕರ್ನಾಟಕ, ರೂ. 2,500). ಹೇಮಂತ್ ರಾಮ್ (ತಮಿಳುನಾಡು ರೂ. 2,500). ಶ್ರಮಾ ಆರ್. ಪ್ರೀತಮ್ (ಕರ್ನಾಟಕ, ರೂ, 2,500), ಸೆಂಥಿಲ್ ಮಾರನ್ (ತಮಿಳುನಾಡು, ರೂ. 2,500), ಕುಮಾರ್ ತೇಜ (ಕರ್ನಾಟಕ, ರೂ. 2,000). ಅರವಿಂದ್ ಬಿ,ಆರ್. (ಕರ್ನಾಟಕ, ರೂ, 2,000). ನಿಗಾಶ್ ಜಿ (ತಮಿಳುನಾಡು, ರೂ. 2,000), ರಾಘವೇಂದ್ರ ಜಿ. (ಕರ್ನಾಟಕ ರೂ. 2,000), ಅಭಿನವ್ ಭಟ್ (ಕರ್ನಾಟಕ ರೂ. 1,500). ಹರಿಹರನ್ ಸುಬ್ರಮಣಿ (ಕರ್ನಾಟಕ, ರೂ. 1,500), ವೇದಾಂತ್ ನಾಗರಕಟ್ಟೆ (ಮಹಾರಾಷ್ಟ್ರ, ರೂ. 1,500). ಭರತ್ ಎಂ, (ಕರ್ನಾಟಕ, ರೂ. 1,500). ತೇಜಸ್ ಎಂ. ಶೆಣೈ (ಕರ್ನಾಟಕ, ರೂ.1,500).
ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ನ ಗೌರವಾಧ್ಯಕ್ಷ ಡಾ. ರಾಜಗೋಪಾಲ್ ಶೆಣೈ ವಹಿಸಿದ್ದರು. ಕುಳಾಯಿ ಫೌಂಡೇಷನ್ನ ಪ್ರತಿಭಾ ಕುಳಾಯಿ, ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಷನ್ನ ಅಧ್ಯಕ್ಷ ರಮೇಶ್ ಕೋಟೆ, ಉದ್ಯಮಿ ರಂಜನ್ ನಾಗರಕಟ್ಟೆ, ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಗೌತಮ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು,
ತೀರ್ಪಗಾರರಾಗಿ ಅಂತಾರಾಷ್ಟ್ರೀಯ ತೀರ್ಪುಗಾರ ವಸಂತ್ ಬಿಎಚ್, ಸಾಕ್ಷಾತ್ ಯು,ಕೆ, ಬಾಬು ಪೂಜಾರಿ, ಸೌಂದರ್ಯ ಯು.ಕೆ, ಸಹಕರಿಸಿದರು. ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಉಮಾನಾಥ್ ಮತ್ತು ನಯನ್ ಕುಮಾರ್ ಕಾರ್ಕಳ ಸಹಕರಿಸಿದರು. ಪ್ರಿಯಾಂಕ ಪಾಟೀಲ್ ಕಾರ್ಮಕ್ರಮ ನಿರೂಪಿದರು.
ಇದನ್ನೂ ಓದಿ:
► ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್: ಫಿಡೆ ರೇಟೆಡ್ ಚೆಸ್ ಟೂರ್ನಿ ಉದ್ಘಾಟನೆ – https://kundapraa.com/?p=56008 .