Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳಕ್ಕೆ ನಟ ದರ್ಶನ್ ತೂಗುದೀಪ್, ಚಿಕ್ಕಣ್ಣ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ್, ಹಾಸ್ಯನಟ ಚಿಕ್ಕಣ್ಣ ಹಾಗೂ ಅವರ ಸ್ನೇಹಿತರು ಸೋಮವಾರ ಭೇಟಿ ನೀಡಿದರು.

ದೇವಳದಲ್ಲಿ ನವಚಂಡಿಕಾ ಯಾಗದಲ್ಲಿ ಪಾಲ್ಗೊಂಡ ಅವರು, ಬಳಿಕ ದೇವಿಯ ದರ್ಶನ ಪಡೆದರು. ದೇವಳದ ಟ್ರಸ್ಟೀಗಳಾದ ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ಹಾಗೂ ಇನ್ನಿತರರು ನಟರನ್ನು ಗೌರವಿಸಿದರು.

Exit mobile version