Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ: ಯುತ್ ರೆಡ್‌ಕ್ರಾಸ್ ವಿಂಗ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ’ಯುತ್ ರೆಡ್‌ಕ್ರಾಸ್ ವಿಂಗ್’ ಇತ್ತಿಚಿಗೆ ಉದ್ಘಾಟನೆಗೊಂಡಿತು.

ಕುಂದಾಪುರದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಭಾಪತಿ ಜಯಕರ ಶೆಟ್ಟಿ ಘಟಕವನ್ನು ಉದ್ಘಾಟಿಸಿ ಮಾತನಾಡಿ ರೆಡ್‌ಕ್ರಾಸ್ ಸೊಸೈಟಿಯ ಉಗಮ, ವಿಸ್ತಾರವು ಜಗತ್ತಿನಾದ್ಯಂತ ಆದುದು ಮಾತ್ರವೇ ಅಲ್ಲದೆ ಶಾಂತಿ ಸೌಹಾರ್ಧತೆಯನ್ನು ಕಾಪಾಡುವ ಸಾಮಾಜಿಕ ಕಳಕಳಿಯ ಸಂಸ್ಥೆ ಎನ್ನುವುದಕ್ಕೆ ನಮಗೆಲ್ಲಾ ಹೆಮ್ಮೆಯ ವಿಚಾರ ಎಂದರು.

ಸತ್ಯನಾರಾಯಣ ಪುರಾಣಿಕ್ ಇವರು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಇಂದಿನ ಯುವಜನತೆಯನ್ನು ಸಮಾಜಮುಖಿ ಕಾರ್ಯದತ್ತ ಕೊಂಡೊಯ್ಯುವ ಘಟಕ ಈ ರೆಡ್ ಕ್ರಾಸ್ ಘಟಕವಾಗಿದೆ. ಮೊಬೈಲ್‌ನ ಗೀಳು ಬಿಟ್ಟು ಸಮಾಜಮುಖಿಯಾಗಿ ತಮ್ಮನ್ನು ಸಮರ್ಪಿಸಿಕೊಂಡು ನೆಮ್ಮದಿಯಾಗಿ ಬದುಕಿ ಎಂದರು. ಖಜಾಂಚಿ ಶ್ರೀ.ಶಿವರಾಮ ಶೆಟ್ಟಿ, ಶ್ರೀ.ಗಣೇಶ್ ಆಚಾರ್ಯ ಹಾಗೂ ಶ್ರೀ.ಅಬ್ದುಲ್ ಬಶೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುತ್ ರೆಡ್‌ಕ್ರಾಸ್ ಘಟಕದ ಉಸ್ತುವಾರಿ ಉಪನ್ಯಾಸಕ ಅಹ್ಮದ್ ಖಲೀಲ್ ಸ್ವಾಗತಿಸಿ, ಘಟಕದ ವಿದ್ಯಾರ್ಥಿ ಮುಖಂಡ ಫಿಝಾನ್ ವಂದಿಸಿದರು. ಕುಮಾರಿ ಶೈಮಾ ಕಾರ್ಯಕ್ರಮ ನಿರೂಪಿಸಿದರು.

Exit mobile version