Kundapra.com ಕುಂದಾಪ್ರ ಡಾಟ್ ಕಾಂ

ವಾಟ್ಸಪ್ ಗ್ರೂಪಿಗೆ ಅಶ್ಲೀಲ ಪೋಟೋ ಕಳುಹಿಸಿದ ಗ್ರಾ.ಪಂ. ಸದಸ್ಯನ ವಿರುದ್ಧ ದೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮಡಾಮಕ್ಕಿಯ ದೇವಸ್ಥಾನವೊಂದರ ವಾಟ್ಸಪ್ ಗ್ರೂಪಿನಲ್ಲಿ ಮಹಿಳೆಯ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದ ಗ್ರಾ.ಪಂ ಸದಸ್ಯನೋರ್ವನ ವಿರುದ್ಧ ದೂರು ದಾಖಲಾಗಿದೆ.

ಮಡಮಕ್ಕಿ ಗ್ರಾಮದ ದೇವಳವೊಂದರ ವಾಟ್ಸಪ್ ಗ್ರೂಪಿನಲ್ಲಿ ಗ್ರಾಮದ ಪ್ರಮುಖ ವ್ಯಕ್ತಿಗಳು ಹಾಗೂ ಮಹಿಳೆಯರು ಇದ್ದುದ್ದರಿಂದ ಗ್ರಾಮ ಪಂಚಯತ್ ಸದಸ್ಯ ಹಾಕಿರುವ ಪೊಸ್ಟ್ ನಿಂದ ಎಲ್ಲರಿಗೂ ಮುಜುಗರ ಉಂಟಾಗಿರುವ ಬಗ್ಗೆ ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿದ್ದರು. ಕೆಲವರು ಹಾಕಿರುವ ಪೊಸ್ಟ್ ಡಿಲೀಟ್ ಮಾಡಲು ವಿನಂತಿಸಿದರೂ ಕೂಡ ಡಿಲೀಟ್ ಮಾಡದ ಹಿನ್ನಲೆಯಲ್ಲಿ ಮಡಮಕ್ಕಿ ಗ್ರಾಮಸ್ಥರೋರ್ವರು ಉಡುಪಿಯ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್ ಪೊಲೀಸರು ಗ್ರಾಮ ಪಂಚಯತ್ ಸದಸ್ಯನ ವಿಚಾರಣೆ ನಡೆಸಿದ್ದು, ತನ್ನ ಕೈ ತಪ್ಪಿನಿಂದ ಅಶಿಲ್ಲ ಚಿತ್ರ ವಾಟ್ಸಪ್ ಗ್ರೂಪಿನಲ್ಲಿ ಶೇರ್ ಅಗಿದ್ದು , ಈ ಬಗ್ಗೆ ಗ್ರಾಮಸ್ಥರಲ್ಲಿ ಕ್ಷಮೆಯಾಚಿಸುವುದಾಗಿ ಠಾಣೆಯಲ್ಲಿ ಲಿಖಿತ ರೂಪದಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.

Exit mobile version