Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಬೈಂದೂರು: 9ನೇ ವರ್ಷದ ಟ್ರಸ್ಟ್ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ 9ನೇ ವರ್ಷದ ಟ್ರಸ್ಟ್ ದಿನಾಚರಣೆ ಶ್ರೀ ಸೀತಾರಾನಚಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿತು.

ಕಾರ್ಯಕ್ರಮದ ಅತಿಥಿಯಾಗಿದ್ದ ಬೆಂಗಳೂರು ರಾಮರಾಜ ಕ್ಷತ್ರಿಯ ಸಮಾಜದ ಮಾಜಿ ಅಧ್ಯಕ್ಷ ಡಿ. ಕೆ. ಮಂಜುನಾಥ ಮಾತನಾಡಿ ಬದುಕಿನಲ್ಲಿ ನಾವು ಗಳಿಸಿದ ಹಣ-ಸಂಪತ್ತು ಕರಗಿ ಹೊಗಬಹುದು ಆದರೆ ಮಾಡಿದ ದಾನ ಧರ್ಮ ಪುಣ್ಯ ಕಾರ್ಯಗಳು ಸದಾ ಹಸಿರಾಗಿ ಉಳಿಯುತ್ತದೆ. ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಮಾಡುವ ಕಾರ್ಯಕ್ಕೆ ಎಲ್ಲರೂ ಜೊತೆಗೂಡಬೇಕು. ಸಮಾಜದಿಂದ ಪ್ರಯೋಜನ ಪಡೆದವರು ಸಮಾಜಕ್ಕೆ ಮತ್ತಷ್ಟು ಉತ್ತಮ ಕಾರ್ಯ ಮಾಡುವಂತಾಗಬೇಕು ಎಂದರು.

ಶ್ರೀರಾಮ ಗೃಹನಿರ್ಮಾಣ ಯೋಜನೆಯ ಘಲಾನುಭವಿಗೆ ಬೀಗದಕೈ ಹಸ್ತಾಂತರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ವಿಶೇಷ ಪ್ರೋತ್ಸಾಹ ನಿಧಿ ವಿತರಣೆ ಈ ಸಂದರ್ಭ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಮಾತನಾಡಿ, ರಾಮಕ್ಷತ್ರಿಯ ಸಮಾಜದವರಿಗಾಗಿ ಬಡವರು, ಅಶಕ್ತರಿಗೆ ಸಹಾಯ, ನೆರವು ನೀಡುವ ಉದ್ದೇಶದಿಂದ ಆರಂಭಿಸಲಾದ ಟ್ರಸ್ಟ್ ಮೂಲಕ ಹತ್ತಾರು ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಗೃಹ ನಿರ್ಮಾಣ, ವಿಧವಾ ವೇತನ ಮುಂತಾದ ಯೋಜನೆಗಳನ್ನು ಹಲವು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪಡೆಯುವ ಕೈಗಳು ಕಡಿಮೆಯಾಗಿ ಕೊಡುವ ಕೈಗಳು ಹೆಚ್ಚಲಿ ಎಂದರು.

ಸ್ವರ್ಣವಲ್ಲಿ ರಾಮಕ್ಷತ್ರಿಯ ಸೀಮಾ ಪರಿಷತ್ ಅಧ್ಯಕ್ಷರಾದ ಸುರೇಶ್ ಕೃಷ್ಣ ನಾಯ್ಕ್ ಪುನಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ನಿವೃತ್ತ ಕರ್ನಲ್ ಡಿ. ಕೆ. ನರಸಿಂಹ ನಾಯಕ್ ಬೆಂಗಳೂರು, ಬೆಂಗಳೂರಿನ ಮಕ್ಕಳ ತಜ್ಞ ಡಾ. ಸುಬ್ರಾಯ ಹೆಚ್., ಮಂಗಳೂರು ವಿಭಾಗ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್, ಮಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯ ಪ್ರೋ. ಕರುಣಾಕರ ಕೋಟೇಗಾರ್, ಉದ್ಯಮಿ ಸದಾನಂದ ಶೇರುಗಾರ್, ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಡಿ. ಸತೀಶ್, ಬೈಂದೂರು ರಾಮಕ್ಷತ್ರಿಯ ಸಂಘದ ಕಾರ್ಯದರ್ಶಿ ಹನುಮಂತ ಜಿ. ಮಯ್ಯಾಡಿ ಅತಿಥಿಗಳಾಗಿದ್ದರು.

ನಿಧನರಾದ ಟ್ರಸ್ಟೀಗಳಾದ ವಿಶ್ವೇಶ್ವರ ಎನ್. ಮಯ್ಯಾಡಿ, ಶಂಕರ ಆರ್. ಮದ್ದೋಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೂತನವಾಗಿ ಸೇರ್ಪಡೆಗೊಂಡ ಟ್ರಸ್ಟೀಗಳಾದ ಚಂದ್ರಶೇಖರ ಕಲ್ಪತರು, ಕೃಷ್ಣಯ್ಯ ವಿ. ಮದ್ದೋಡಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಅತಿಥಿಗಳನ್ನು ಸನ್ಮಾನಿಸಲಾಯಿತು.

ಟ್ರಸ್ಟಿಗಳಾದ ಬಿ. ಶ್ರೀನಿವಾಸ ಶೇರೆಗಾರ್, ಬಿ. ಶ್ರೀಧರ ಪಡುವರಿ, ಶ್ರೀನಿವಾಸ ಜಿ. ಶಿವಮೊಗ್ಗ, ವೆಂಕಟೇಶ ಕೆ.ಟಿ ಬಿಜೂರು, ಹೆಚ್. ಸುಬ್ರಾಯ ಶೇರೆಗಾರ್, ಜಯಾನಂದ ಹೋಬಳಿದಾರ್, ಜಯಂತಿ ನಾರಾಯಣ ರಾವ್,ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀಧರ ಪಿ. ಪಡುವರಿ ಉಪಸ್ಥಿತರಿದ್ದರು.

ಟ್ರಸ್ಟೀ ಅಶೋಕ ಕುಮಾರ್ ಬಾಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕ ಆನಂದ ಮದ್ದೋಡಿ ವಾರ್ಷಿಕ ವರದಿ ವಾಚಿಸಿದರು. ಟ್ರಸ್ಟೀ ವೆಂಕಟರಮಣ ಬಿಜೂರು ಸ್ವಾಗತಿಸಿ, ಸಂಚಾಲಕ ಕೇಶವ ನಾಯ್ಕ್ ಬಿಜೂರು ವಂದಿಸಿದರು.

ಶಿಕ್ಷಕರಾದ ಗಣಪತಿ ಹೋಬಳಿದಾರ್, ಸುಧಾಕರ ಪಿ., ಭಾಸ್ಕರ ಬಾಡ, ವೆಂಕಟರಮಣ ಮಯ್ಯಾಡಿ, ರವಿರಾಜ ಮಯ್ಯಾಡಿ, ರಾಘವೇಂದ್ರ ಎನ್. ತಗ್ಗರ್ಸೆ, ನಾಗರಾಜ ಬಿ ಮೊದಲಾದವರು ಸಹಕರಿಸಿದರು.

Exit mobile version