Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಸರಕಾರಿ ಶಾಲೆಗೆ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಅವರು ಶುಕ್ರವಾರ ಭೇಟಿ ನೀಡಿದರು.

ಪ್ರಥಮ ಭಾರಿ ಶಾಲೆಗೆ ಭೇಟಿ ನೀಡಿದ ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಶಾಲಾ ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಶಾಲೆಗೆ ಅಭಿವೃದ್ಧಿಗೆ ನೆರವು ನೀಡುವಂತೆ ಮನವಿ ಸಲ್ಲಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಭಾಕರ ಗಾಣಿಗ, ಸದಸ್ಯರಾದ ಆನಂದ ಗಾಣಿಗ, ವೀರಭದ್ರ ಗಾಣಿಗ, ಶ್ಯಾಮಲಾ ಪೂಜಾರಿ, ರೇವತಿ ಶೆಟ್ಟಿ, ಗೋವಿಂದ ಮೊಗವೀರ, ಹಳೆ ವಿದ್ಯಾರ್ಥಿ ಸಂಘದ ವಸಂತ ಮೊಗವೀರ, ಮಹದೇವ ಬಿಲ್ಲವ, ರವೀಂದ್ರ ಗಾಣಿಗ, ಚಂದ್ರಶೇಖರ ಗಾಣಿಗ, ಸುರೇಶ್ ಪೂಜಾರಿ, ಪತ್ರಕರ್ತ ಮಹೇಶ್ ಗಾಣಿಗ, ಶಾಲಾ ಮುಖ್ಯ ಶಿಕ್ಷಕರಾದ ಜ್ಯೋತಿ ಶ್ರೀಧರ್, ಶಿಕ್ಷಕರಾದ ಅಂಬಾಬಾಯಿ, ಸಂಗೀತಾ, ಸಾರಿಕಾ, ಮಾಲತಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Exit mobile version