Kundapra.com ಕುಂದಾಪ್ರ ಡಾಟ್ ಕಾಂ

ಡಾ. ಮಧುಕರ ಶೆಟ್ಟಿ ಅವರ ಜೀವನವೇ ಯುವ ಜನಾಂಗಕ್ಕೆ ಒಂದು ಅಧ್ಯಾಯ: ಡಾ. ಪ್ರಶಾಂತ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಆರ್‌.ಎನ್.ಶೆಟ್ಟಿ ಸಭಾ ಭವನದಲ್ಲಿ ಭಾನುವಾರ ಕುಂದಾಪುರ ತಾಲ್ಲೂಕು ಯುವ ಬಂಟರ ಸಂಘದ ವತಿಯಿಂದ ಸಂಸ್ಮರಣಾ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.

ಡಾ.ಮಧುಕರ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿದ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ ಬದುಕಿದ್ದ ದಿನಗಳಲ್ಲಿ ವೃತ್ತಿಪರ, ನಿಷ್ಠಾವಂತ, ಕರ್ತವ್ಯ ದಕ್ಷತೆಯ ಕಾರ್ಯದಿಂದಾಗಿ ಇಂದಿಗೂ ಜನಮಾನಸಲ್ಲಿ ಜೀವಂತವಾಗಿರುವ, ದಕ್ಷ ಹಾಗೂ ಪ್ರಾಮಾಣಿಕ ಐಪಿಎಸ್ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಜೀವನದ ಅಮೃತ ಕ್ಷಣಗಳಾಗಿದೆ. ಇಂದಿನ ಯುವ ಜನಾಂಗಕ್ಕೆ ಅವರ ಜೀವನವೇ ಒಂದು ಅಧ್ಯಾಯವಿದ್ದಂತೆ ಎಂದು ಹೇಳಿದರು.

ಸಂಸ್ಮರಣಾ ಪ್ರಶಸ್ತಿ ವಿತರಿಸಿ ಮಾತನಾಡಿದ ಉಡುಪಿ ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಅವರು, ಸಂಘ-ಸಂಸ್ಥೆಗಳು ಹಾಗೂ ದಾನಿಗಳು ವಿದ್ಯಾರ್ಜನೆಗಾಗಿ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳು, ಇದರ ಸದುದ್ದೇಶಗಳನ್ನು ಅರ್ಥ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಂಡ ಬಳಿಕ, ತಾವು ಪಡೆದುಕೊಂಡಿರುವ ವಿದ್ಯಾರ್ಥಿ ವೇತವನ್ನು ನೀಡಿದ ಸಂಸ್ಥೆಗಳಿಗೆ ಹಿಂತಿರುಗಿಸುವ ಮೂಲಕ ಇನ್ನಷ್ಟಯ ವಿದ್ಯಾರ್ಥಿಗಳ ಶಿಕ್ಷಣ ಬಾಳಿಗೆ ಬೆಳಕಾಗಬೇಕು.ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್, ಐಆರ್ಎಸ್ ತರಬೇತಿಗೆ ಅವಕಾಶ ಪಡೆಯುವವರಿಗೆ ನಮ್ಮ ಸಂಸ್ಥೆಯಿಂದ 5 ಲಕ್ಷ ರೂ. ನೆರವು ನೀಡುವುದಾಗಿ ಹೇಳಿದರು.

ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಅಧ್ಯಕ್ಷತೆ ವಹಿಸಿದ್ದರು. ಯುವ ಚೈತನ್ಯ ಸಂಚಿಕೆಯನ್ನು ಬೆಂಗಳೂರಿನ ಪ್ರೀಮಿಯರ್ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಗದೀಶ್ ಶೆಟ್ಟಿ ಅನಾವರಣಗೊಳಿಸಿದರು. ದಿ.ಎಂ. ಗೋಪಾಲಕೃಷ್ಣ ಶೆಟ್ಟಿ ಕಂದಾವರ ಕೆಳಾಮನೆ ಸಂಸ್ಮರಣಾ ಪ್ರಗತಿಪರ ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಸಾವಯವ ಕೃಷಿಕ ಹೆರಿಯಣ್ಣ ಶೆಟ್ಟಿ ಯಡಾಡಿ-ಮತ್ಯಾಡಿ ಅವರಿಗೆ ಹುಬ್ಬಳ್ಳಿಯ ಹೋಟೇಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಪ್ರದಾನ ಮಾಡಿದರು. 300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ರಜತ್ ರತ್ನಾಕರ ಶೆಟ್ಟಿ, ಡಾ.ಆಶಿತ್ ರತ್ನಾಕರ ಶೆಟ್ಟಿ ಹೇರಿಕುದ್ರು, ಡಾ.ರಚನಾ ಸುರೇಶ ಶೆಟ್ಟಿ ಮಂಡಳ್ಳಿ, ಪರಿಸರವಾದಿ ಎಚ್. ಶಶಿಧರ ಶೆಟ್ಟಿ, ರಕ್ಷಿತ್ ಶೆಟ್ಟಿ ಕದಳಿ, ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ, ವಿದ್ಯಾರ್ಥಿಗಳಾದ ಅನುಶ್ರೀ ಬಾಬು ಶೆಟ್ಟಿ ಅಸೋಡು, ಅನುಶ್ರೀ ಭುಜಂಗ ಶೆಟ್ಟಿ ಸಿದ್ದಾಪುರ, ರಾಜೇಶ್ವರಿ ರತ್ನಾಕರ ಶೆಟ್ಟಿ ಕಾಲ್ತೋಡು, ಸೀಮಾ ಶೆಟ್ಟಿ ಕೆರಾಡಿ, ಭರತ್ ಶೆಟ್ಟಿ ಕೊಡ್ಲಾಡಿ, ಆದರ್ಶ್ ಎಂ. ಶೆಟ್ಟಿ, ಚಲನ್ ಚಂದ್ರ ಶೆಟ್ಟಿ ಮಣಿಗೇರಿ, ವಿಲಾಸ್ ಶೆಟ್ಟಿ ಬಗ್ವಾಡಿ, ನರೇಶ್ ಶೆಟ್ಟಿ ಹುಯ್ಯಾರು, ಸಂಕೇತ್ ಹೆಗ್ಡೆ ಸಳ್ವಾಡಿ, ವಾಲಿಬಾಲ್ ಪಟು ಕೌಶಿಕ್ ಕೆ. ಶೆಟ್ಟಿ ಕಟ್ಕೇರಿ ಅವರನ್ನು ಗೌರವಿಸಲಾಯಿತು.

ತಾಲ್ಲೂಕು ಬಂಟರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಆನಂದರಾಮ ಶೆಟ್ಟಿ ಬೆಂಗಳೂರು, ಅಮರನಾಥ ಶೆಟ್ಟಿ ಹೆಗ್ಗುಂಜೆ, ರಾಜೇಂದ್ರ ವಿ. ಶೆಟ್ಟಿ, ಜಗದೀಶ್ ಶೆಟ್ಟಿ ಕುದ್ರುಕೋಡು, ಸುರೇಂದ್ರ ನಾರಾಯಣ ಶೆಟ್ಟಿ ಕಾನ್ಕಿ, ಡಾ.ಪುನೀತ್ ಶೆಟ್ಟಿ ಬೆಂಗಳೂರು, ಕರುಣಾಕರ ಹೆಗ್ಡೆ ಆನಗಳ್ಳಿ, ಕೆ.ಟಿ. ಶಂಕರ ಶೆಟ್ಟಿ ಮುಂಬೈ, ಕಂದಾವರ ಸತೀಶ್ ಶೆಟ್ಟಿ, ರತ್ನಾಕರ ವಿ ಶೆಟ್ಟಿ ಮುಂಬೈ, ಯುವ ಬಂಟರ ಸಂಘದ ಗೌರವಾಧ್ಯಕ್ಷ ಡಾ.ರಂಜನ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಹುಂಚನಿ, ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು, ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಗೌರವ ಸಲಹೆಗಾರರಾದ ಸುಕೇಶ್ ಶೆಟ್ಟಿ ಹೊಸಮಠ, ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ ಇದ್ದರು.

ಪ್ರವೀಣ್ ಕುಮಾರ ಶೆಟ್ಟಿ ಹರ್ಕೂರು ಸ್ವಾಗತಿಸಿದರು, ಪ್ರತಾಪ್‌ಚಂದ್ರ ಶೆಟ್ಟಿ ಹಳ್ನಾಡು ಪ್ರಾಸ್ತಾವಿಕ ಮಾತನಾಡಿದರು, ಸಾಯಿ ವಿಜೇತ ಪ್ರಾರ್ಥಿಸಿದರು, ಚೇತನ್ ಶೆಟ್ಟಿ ಕೋವಾಡಿ ಸನ್ಮಾನ ಪತ್ರ ವಾಚಿಸಿದರು, ಅಕ್ಷಯ್ ಹೆಗ್ಡೆ ಮೊಳಹಳ್ಳಿ ಹಾಗೂ ಸಚಿನ್‌ಕುಮಾರ ಶೆಟ್ಟಿ ಹುಂಚನಿ ನಿರೂಪಿಸಿದರು, ಉದಯ್‌ಕುಮಾರ ಶೆಟ್ಟಿ ಮಚ್ಚಟ್ಟು ವಂದಿಸಿದರು.

Exit mobile version