Kundapra.com ಕುಂದಾಪ್ರ ಡಾಟ್ ಕಾಂ

ಪುನೀತ್ ಸಾಗರ್ ಅಭಿಯಾನ: ಬೈಂದೂರು ಪದವಿ ಕಾಲೇಜಿನ ಎನ್.ಸಿ.ಸಿ. ನೇವಲ್ ಯುನಿಟ್ ಭಾಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಾಗರ, ನದಿ, ಸಮುದ್ರಗಳು ಪ್ರಕೃತಿಯ ಖಜಾನೆಗಳು. ನಮ್ಮನ್ನು ಅನವರತ ರಕ್ಷಿಸುತ್ತಿರುವ ಇವುಗಳನ್ನು ಸತತವಾಗಿ ಮಲಿನಗೊಳಿಸುತ್ತಿರುವ ನಾವು ಇನ್ನಾದರೂ ಎಚ್ಚರಗೊಳ್ಳಬೇಕು. ಈ ಭೂಮಂಡಲವನ್ನೇ ಆಪೋಶನ ತೆಗೆದುಕೊಳ್ಳುತ್ತಿರುವ ಪ್ಲಾಸ್ಟಿಕ್ ಸಕಲ ಜೀವ ಜಂತುಗಳಿಗೂ ಹೇಗೆ ಮಾರಕವಾಗಿದೆ ಎಂಬುದನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಹೇಳಿದರು.

ಎನ್.ಸಿ.ಸಿ. ನೇವಲ್ ಯುನಿಟ್ ಉಡುಪಿ, ಬೈಂದೂರು ಪದವಿ ಕಾಲೇಜಿನ ಎನ್.ಸಿ.ಸಿ. ನೇವಲ್ ಯುನಿಟ್ ಹಾಗೂ ಪಟ್ಟಣ ಪಂಚಾಯಿತಿ ಬೈಂದೂರು ಇವರ ಸಹಯೋಗದೊಂದಿಗೆ ಪುನೀತ್ ಸಾಗರ್ ಅಭಿಯಾನದಡಿ ನಡೆದ ಬೈಂದೂರು ಸೋಮೇಶ್ವರ ಬೀಚ್ನ ಸ್ವಚ್ಛತಾ ಕಾರ್ಯಕ್ರಮವನ್ನು ಆರಂಭಿಸಿ ಅವರು ಮಾತನಾಡಿದರು. ಸಾಗರದ ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಆರಂಭವಾದ ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ನೇವಲ್ ಯುನಿಟ್ ಉಡುಪಿಯ ಪಿ.ಐ. ಸ್ಟಾಫ್ ಶ್ರೀ ಗಂಗಾಧರ್, ಕಾಲೇಜಿನ ಎನ್.ಸಿ.ಸಿ. ಯುನಿಟ್ನ 34 ಕೆಡೆಟ್ಗಳು, ಎನ್.ಸಿ.ಸಿ.ನೇವಿ ಅಧಿಕಾರಿ ಶ್ರೀಮತಿ ಮೀನಾಕ್ಷಿ, ಭಂಡಾರ್ಕರ್ಸ್ ಕಾಲೇಜಿನ ಸೀನಿಯರ್ ಕೆಡೆಟ್ಗಳು, ಪಟ್ಟಣ ಪಂಚಾಯಿತಿ ಬೈಂದೂರಿನ ಸಿಬ್ಬಂದಿಗಳು ಹಾಜರಿದ್ದರು.

Exit mobile version