Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆಯಲ್ಲಿ ರೋಟರಿ ಹ್ಯಾಪಿ ಸ್ಕೂಲ್

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಲಿಟ್ರಸಿ ಯೋಜನೆಯಡಿ ಹ್ಯಾಪಿ ಸ್ಕೂಲ್ ರಚನೆಯ ಕುರಿತು ಸಮಾಲೋಚನ ಸಭೆ ನಡೆಯಿತು.

ವಂಡ್ಸೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶತಮಾನೋತ್ಸವವನ್ನು ಆಚರಿಸುತ್ತಿರುವ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹ್ಯಾಪಿ ಸ್ಕೂಲ್‌ನ್ನಾಗಿ ಮಾಡುವ ಕುರಿತು ರೋಟರಿ ಕ್ಲಬ್ ಕುಂದಾಪುರ ಆಸಕ್ತಿಯನ್ನು ಹೊಂದಿದೆ ಎಂದು ಹ್ಯಾಪಿ ಸ್ಕೂಲ್‌ನ ವಿಶೇಷತೆಯನ್ನು ಕ್ಲಬ್‌ನ ಲಿಟ್ರಸಿ ಚೇರ್‌ಮೆನ್ ಗೋಪಾಲ ಶೆಟ್ಟಿ ಸಭೆಗೆ ವಿವರಿಸಿದರು.

ವಂಡ್ಸೆ ಗ್ರಾ. ಪಂ. ಅಧ್ಯಕ್ಷ ಹಾಗೂ ರೋಟರಿ ನಿಯೋಜಿತ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕ್ಲಬ್ ಸೇವೆ ನಿರ್ದೇಶಕ ಸಾಲಗದ್ದೆ ಶಶಿಧರ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯಿನಿ ಮೋಹಿನಿ ಬಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ಮೊಗವೀರ ರಾಯಪ್ಪನಹಾಡಿ, ಉಪಾಧ್ಯಕ್ಷೆ ಕಲ್ಪನಾ ಶೆಟ್ಟಿ, ಸದಸ್ಯರಾದ ಉದಯ ಕೆ. ನಾಯ್ಕ್, ದಯಾನಂದ ಆಚಾರ್, ಶಂಕರ ಆಚಾರ್, ರಘುರಾಮ, ಇಂದಿರಾ, ಶಾರದಾ, ಮುಕಾಂಬು, ಮುತ್ತು, ಚಿಕ್ಕು, ರಾಮ, ಕೆ.ಎಸ್. ಬಿಸ್ಸಿ, ನಜ್ಮಾ ಅಬೀನಾ, ಗೀತಾ, ಶ್ಯಾಮಲಾ, ಸುಜಾತ, ವಸಂತಿ ಬಿ.ಜಿ.ಸುಬ್ರಹ್ಮಣ್ಯ, ಮೂಕಾಂಬಿಕಾ, ಆಶಾ, ವಿದ್ಯಾರ್ಥಿ ಮುಖಂಡ ಪ್ರಜ್ವಲ್, ಗ್ರಾ. ಪಂ. ಸದಸ್ಯರಾದ ಗುಂಡು ಪೂಜಾರಿ, ಶ್ರಂಗಾರಿ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

Exit mobile version