ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕೃಪಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೫ನೇ ವಾರ್ಷಿಕ ಮಹಾಸಭೆಯು ಕೊಟೇಶ್ವರದ ಸಂಘದ ಕಚೇರಿಯಲ್ಲಿ ಜರುಗಿತು. ಸಂಘದ ಅಧ್ಯಕ್ಷ ಶ್ರೀನಿವಾಸ್ ಪ್ರಭು ಹುಣ್ಸೆಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಂ ದಯಾನಂದ್ ರಾವ್ ಕುಂದಾಪುರ, ಸದಾಶಿವ ಶೇಟ್ ಕೋಟೇಶ್ವರ, ಕೆ ಅಣ್ಣಪ್ಪ ನಾಯ್ಕ್ ಸೇನಾಪುರ, ಕೆ ಕೋಣಿ ವೆಂಕಟೇಶ್ ನಾಯ್ಕ್ ಬೈಂದೂರು, ಕೆ ರಾಮಚಂದ್ರ ಶೇಟ್ ನೆಲ್ಲಿಕಟ್ಟೆ, ರೂಪಾ ಬಿ ಶೇಟ್ ಕೋಟೇಶ್ವರ, ಲತಾ ಎಲ್ ಶೇಟ್ ವಕ್ವಾಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ವೈಶ್ಯವಾಣಿ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಗಣಪತಿ ನಾಯ್ಕ ಕೋಣಿ ವಾರ್ಷಿಕ ವರದಿ ವಾಚಿಸಿದರು. ರಾಜೇಶ್ ನಾಯಕ್ ಕುಂದಾಪುರ ಕಾರ್ಯಕ್ರಮ ನಿರ್ವಹಿಸಿದರು.