Kundapra.com ಕುಂದಾಪ್ರ ಡಾಟ್ ಕಾಂ

ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ: ವರ್ಣ ವೈಭವ, ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಮಾಜದಲ್ಲಿ ಇಂದು ಎಲ್ಲ ವರ್ಗದ ಜನರಿದ್ದಾರೆ. ಎಲ್ಲರಿಗೂ ಒಳಿತು ಮಾಡುವಂತೆ ಪ್ರಾರ್ಥನೆ ಸಲ್ಲಿಸಿ, ಪ್ರತಿಯೊಬ್ಬರು ಭಗವಂತನನ್ನು ಕಾಣುವಂತೆ ಪ್ರೇರಿಪಿಸಿ ಮಾರ್ಗದರ್ಶಿಸಿದವರು ಮಧೂಸೂಧನ ಬಾಯಿರಿಯವರು. ಸಮಾಜದಲ್ಲಿ ಮೌಲ್ಯಯುತವಿರುವ ಇತಂಹ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕೆಲಸಗಳನ್ನು ಯಶಸ್ವಿ ಕಲಾವೃಂದ ಮಾಡಿದೆ. ಯಶಸ್ವಿ ಕಲಾವೃಂದ ಈ ಕಾರ‍್ಯ ಶ್ಲಾಘನೀಯವಾದದ್ದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ‍್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ಅವರು ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಇವರ ನೇತೃತ್ವದಲ್ಲಿ ಭಾನುವಾರ ಸಂಜೆ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜರುಗಿದ ವರ್ಣ ವೈಭವ-೨೧ ಕಾರ‍್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಅಭಿನಂದನಾ ಮಾತುಗಳನ್ನಾಡಿದರು.

ಯಶಸ್ವಿ ಕಲಾವೃಂದ ಕೊಮೆ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯುತ್ ಗುತ್ತಿಗೆದಾರ ಶ್ರೀಕಾಂತ್ ಶಣೈ, ನಿವೃತ್ತ ಆಧ್ಯಾಪಕ ಶ್ರೀನಿವಾಸ ಅಡಿಗ, ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಕಾಂಚನ್, ಯಶಸ್ವಿ ಕಲಾವೃಂದ ಕಾರ‍್ಯದರ್ಶಿ ವೆಂಕಟೇಶ್ ವೈದ್ಯ, ಶಾಂತಾ ಶೆಟ್ಟಿ, ರೋಟರಿ ಜೋನಲ್ ಲಿಪ್ಟೆನೆಂಟ್ ಸುಧಾಕರ್ ಶೆಟ್ಟಿ, ರೋಟರಿ ಮಾಜಿ ಗವರ್ನರ್ ಸುರೇಶ್ ಬೇಳೂರು, ರೋಟರಿ ಕಾರ‍್ಯದರ್ಶಿ ರಾಘವೇಂದ್ರ ದೇವಾಡಿಗ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ ಶ್ರೀಯಾನ್, ಮಲ್ಯಾಡಿ ಲೈವ್‌ನ ಪ್ರಶಾಂತ್ ಮಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಧುಸೂದನ ಬಾಯಿರಿ, ಸಾಹಿತಿ ಪಾರ್ವತಿ ಜಿ ಐತಾಳ್, ಕುಂದನಾಡಿನ ಪ್ರತಿಭೆ ವೈಷ್ಣವಿ ಪುರಾಣಿಕ್ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕು.ಪೂಜಾ ಸ್ವಾಗತಿಸಿದರು. ಹೆರಿಯ ಮಾಸ್ಟರ್ ತೆಕ್ಕಟ್ಟೆ ಪ್ರಸ್ತಾವಿಕ ಮಾತನಾಡಿದರು. ಕು.ಪಂಚಮಿ ಕಾರ‍್ಯಕ್ರಮ ನಿರೂಪಿಸಿದರು. ಸೀತಾರಾಮ ಶೆಟ್ಟಿ ಕೊಕೂರು ವಂದಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ವರ್ಣ ವೈಭವ-೨೧ ಕಾರ‍್ಯಕ್ರಮ ಪ್ರದರ್ಶನ ಗೊಂಡಿತು.

Exit mobile version