Kundapra.com ಕುಂದಾಪ್ರ ಡಾಟ್ ಕಾಂ

ಮದ್ದೋಡಿ ಶಾಲೆ: ವರ್ಗಾವಣೆಗೊಂಡ ಶಿಕ್ಷಕರಾದ ನಾಗೇಶ್ ಆಚಾರ್ಯ, ಸುಬ್ರಹ್ಮಣ್ಯ ಗಾಣಿಗರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮದ್ದೋಡಿ ಸ.ಹಿ.ಪ್ರಾ.ಶಾಲೆಯಿಂದ ಯಳೂರತೊಪ್ಲು ಶಾಲೆಗೆ ವರ್ಗಾವಣೆಗೊಂಡ ನಾಗೇಶ್ ಆಚಾರ್ಯ ಮತ್ತು ತಾರಾಪತಿ ಸ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡ ಸುಬ್ರಹ್ಮಣ್ಯ ಗಾಣಿಗರಿಗೆ ಮದ್ದೋಡಿ ಶಾಲೆಯಲ್ಲಿ ಎಸ್.ಡಿ.ಎಮ್.ಸಿ , ಶಿಕ್ಷಕ ವೃಂದ, ಪೋಷಕರು, ಹಳೆವಿದ್ಯಾರ್ಥಿ ಸಂಘ ಮತ್ತು ಊರವರ ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಜರಗಿತು.

ಸಮಾರಂಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಂಜುನಾಥ ಮರಾಠಿ, ಮತ್ತು ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮತ್ತು ಸದಸ್ಯರು, ಶಾಲೆಯನ್ನು ದತ್ತು ಸ್ವೀಕಾರ ಪಡೆದ ಜೈಸನ್.ಎಮ್.ಡಿ , ಹಿರಿಯರಾದ ಚಿಕ್ಕಯ್ಯ ಶೆಟ್ಟಿ, ಕೃಷ್ಣಪ್ಪ ಶೆಟ್ಟಿ, ಗ್ರಾಮ ಪಂ ಸದಸ್ಯೆ ಮುತ್ತು, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸುಧಾಕರ ದೇವಾಡಿಗ ಮತ್ತು ಸಿ.ಎನ್.ಬಿಲ್ಲವ, ನಿವೃತ್ತ ಶಿಕ್ಷಕ ನಾರಾಯಣ ಹೋಬಳಿದಾರ್, ಕಂಚಿಕಾನು ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ, ಶಾಲೆಯ ಶಿಕ್ಷಕರಾದ ವಿಠಲ ದೇವಾಡಿಗ, ನೀಲಾ, ಮತ್ತು ಸುನಂದಾ ಮಯ್ಯ, ನಾಗಮಣಿ ಮತ್ತು ಅಡುಗೆ ಸಿಬ್ಬಂದಿ ಮುತ್ತು ಮತ್ತು ಸುಜಾತ ಉಪಸ್ಥಿತರಿದ್ದರು.

Exit mobile version