Kundapra.com ಕುಂದಾಪ್ರ ಡಾಟ್ ಕಾಂ

ಬಾಲಪ್ರತಿಭೆ ಸಂಜಿತ್ ಎಂ.ದೇವಾಡಿಗಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ರೋಟರ್ಯಾಕ್ಟ್ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಾಲಪ್ರತಿಭೆ ಸಂಜಿತ್ ಎಂ. ದೇವಾಡಿಗನನ್ನು ಗಂಗೊಳ್ಳಿಯ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ, ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ಅರ್ಚಕರಾದ ರಘುನಾಥ ಪೂಜಾರಿ ಕಳಿಹಿತ್ಲು, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ ಡಿ ನಾಯ್ಕ್,ಸದಸ್ಯರಾದ ದೀಕ್ಷಾ, ಶ್ರೇಯಾ, ತ್ರಿಷಾ, ಪೂಜಾ, ಸುಷ್ಮಾ, ಸಾಯಿರಾಜ್, ಅಭಿಷೇಕ್, ಆದಿತ್ಯ, ಹರೀಶ, ಸುಮಂತ, ಪ್ರಥ್ವಿಜಾ, ಸರಸ್ವತಿ ವಿದ್ಯಾಲಯದ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ, ಸಂಜಿತ್ ದೇವಾಡಿಗನ ತಂದೆ ತಾಯಿ ಮಾಧವ ದೇವಾಡಿಗ ಮತ್ತು ಸಾವಿತ್ರಿ ಎಸ್ ಮೊದಲಾದವರು ಉಪಸ್ಥಿತರಿದ್ದರು.

Exit mobile version