Site icon Kundapra.com ಕುಂದಾಪ್ರ ಡಾಟ್ ಕಾಂ

ಕಾರ್ಯಕ್ರಮದಲ್ಲಿ ಸಿಕ್ಕ ಹಣವನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಚಾಲಕ ರಾಜೇಶ್ ಮೊಗವೀರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮರವಂತೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೊರೆತ ಹಣವನ್ನು ವಾರಿಸುದಾರರಿಗೆ ಹಿಂದಿರುಗಿಸುವ ಮೂಲಕ ಎಸ್ಸಿಾಡಿಸಿಸಿ ಬ್ಯಾಂಕ್ ವಾಹನ ಚಾಲಕ ರಾಜೇಶ್ ಮೊಗವೀರ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾರ್ಯಕ್ರಮಕ್ಕೆ ಬಂದಿದ್ದ ಮರವಂತೆ ರತ್ನಾಕರ ಪೂಜಾರಿ ಎಂಬುವವರು ರೂ.36350 ಹಣ ಕಳೆದುಕೊಂಡಿದ್ದು, ಅದು ರಾಜೇಶ್ ಮೊಗವೀರ ಅವರಿಗೆ ದೊರಕಿತ್ತು. ಕೂಡಲೇ ಕೂಡಲೇ ಮೈಕ್‌ ಮೂಲಕ ಮಾಹಿತಿ ರವಾನಿಸಿದ್ದು, ಅದು ರತ್ನಾಕರ ಪೂಜಾರಿ ಅವರ ಹಣ ಎಂಬುದು ತಿಳಿದುಬಂದಿತ್ತು. ಬಳಿಕ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅವರ ಮೂಲಕ ರತ್ನಾಕರ ಪೂಜಾರಿಯವರಿಗೆ ಹಣವನ್ನು ಹಸ್ತಾಂತರಿಸಲಾಯಿತು. ಬಳಿಕ ರಾಜು ಪೂಜಾರಿ ಅವರು ರಾಜೇಶ್‌ ಮೊಗವೀರ ಅವರನ್ನು ಅಭಿನಂದಿಸಿದರು.

Exit mobile version