Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯಲ್ಲಿ ನೈಟ್ ಕರ್ಪ್ಯೂ, ವಾರಾಂತ್ಯದ ಕರ್ಪ್ಯೂ ರದ್ದಾಗಿಲ್ಲ: ಡಿಸಿ ಸ್ಪಷ್ಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯಲ್ಲಿ ವಾರಾಂತ್ಯ  ಕರ್ಫ್ಯೂ ವನ್ನು ರದ್ದುಪಡಿಸಿದ್ದಾರೆ ತುಣುಕನ್ನು ಹರಿಯಬಿಟ್ಟಿರುವುದು, ಜನರಲ್ಲಿ ಗೊಂದಲ ಸೃಷ್ಟಿ ಮಾಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ಪಷ್ಟನೆ ನೀಡಿದ್ದು, ಜ.5ರಿಂದ ಜಾರಿಯಾದ ಆದೇಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಮುಂದುವರಿಯಲಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಸರಕಾರದ ಆದೇಶದಂತೆ ದಿನಾಂಕ 05.01.2022 ರ ಅಪರಾಹ್ನ 10.00 ರಿಂದ ದಿನಾಂಕ: 19.01.2022 ರ ಪೂರ್ವಾಹ್ನ 5.00ರ ವರೆಗೆ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Exit mobile version