Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರ ಮಹಿಳೆಯರ ಸಾಲಮನ್ನ ಸಂಪೂರ್ಣ ಅನುಷ್ಠಾನಗೊಳಿಸಿ, ನಾಡದೋಣಿಗೆ ಹೆಚ್ಚಿನ ಸೀಮೆಎಣ್ಣೆ ನೀಡಿ: ಬಿ. ನಾಗೇಶ್ ಖಾರ್ವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಜ್ಯ ಸರಕಾರ ಮೀನುಗಾರ ಮಹಿಳೆಯರ ಸಾಲ ಮನ್ನಾ ಘೋಷಣೆ ಮಾಡಿ ಈತನಕ ಸಂಪೂರ್ಣ ಸಾಲ ಮನ್ನಾ ಮಾಡದಿರುವುದರಿಂದ ಮರುಪಾವತಿಸುವಂತೆ ಬ್ಯಾಂಕುಗಳು ಒತ್ತಡ ಹೇರುತ್ತಿವೆ. ನಾಡದೋಣಿ ಮೀನುಗಾರಿಕೆಗೆ ಹೆಚ್ಚಿನ ಸೀಮೆಎಣ್ಣೆ ಒದಗಿಸುವ ಬಗ್ಗೆ ನೀಡದ ಭರವಸೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಸರಕಾರ ಘೋಷಿಸಿದಂತೆ ಮೀನುಗಾರ ಮಹಿಳೆಯರ ಸಂಪೂರ್ಣ ಮನ್ನಾ ಮಾಡಿ ಮೊದಲಿನಂತೆ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲು ಹಾಗೂ ನಾಡದೋಣಿ ಮೀನುಗಾರಿಕೆಗೆ ಭರವಸೆ ನೀಡಿದಂತೆ ಹೆಚ್ಚಿನ ಸೀಮೆಎಣ್ಣೆಯನ್ನು ನಿಗದಿತವಾಗಿ ನೀಡುವ ಬಗ್ಗೆ ಸರಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರ ಸಮಿತಿ ಅಧ್ಯಕ್ಷ ಬಿ. ನಾಗೇಶ್ ಖಾರ್ವಿ ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಸರಕಾರ ಮೀನುಗಾರ ಮಹಿಳೆಯರ ಸಾಲ ಮನ್ನಾ ಎಂದು ಘೋಷಣೆ ಮಾಡಿ ಸಂಪೂರ್ಣ ಸಾಲ ಮನ್ನಾ ಮಾಡದೇ ಇರುವುದರಿಂದ ಮೀನುಗಾರ ಮಹಿಳೆಯರಿಗೆ ಸಾಲ ಮರುಪಾವತಿಸುವಂತೆ ಬಾಂಕು ಹೇರುತ್ತಿದೆ ಆದ್ದರಿಂದ ಬಾಕಿ ಉಳಿಸಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಮೊದಲಿನಂತೆ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ಒದಗಿಸಬೇಕು. ಒಂದು ವೇಳೆ, ಮೀನುಗಾರ ಮಹಿಳೆಯರ ಸಾಲಮನ್ನಾ ಮಾಡದೇ ಇದ್ದಲ್ಲಿ ಹಾಗೂ ಶೂನ್ಯ ಬಡ್ಡಿದರದಲ್ಲಿ ಪುನಃ ಸಾಲ ಒದಗಿಸದೇ ಇದ್ದಲ್ಲಿ ಸಮಸ್ತ ಮೀನುಗಾರ ಮಹಿಳೆಯರು ಸೇರಿ ಉಗ್ರ ಹೋರಾಟವನ್ನು ನಡೆಸಲಿದ್ದಾರೆ. ಅಲ್ಲದೇ, ಈ ಭಾಗದ ಶಾಸಕರು, ಮೀನುಗಾರಿಕಾ ಮಂತ್ರಿಗಳು ಕರಾವಳಿಗೆ, ಮೀನುಗಾರಿಕಾ ಬಂದರುಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮೀನುಗಾರ ಮಹಿಳೆಯರು ಸೇರಿ ಖಾಅ ಮೀನಿನ ಬುಟ್ಟಿ ಹಿಡಿದು ಪ್ರತಿಭಟನೆ ಮಾಡಲಿದ್ದಾರೆ ಎಂದವರು ಎಚ್ಚರಿಸಿದ್ದರೆ.

ಸರಕಾರ ಔಟ್ಬೋರ್ಡ ಇಂಜಿನ್ ಅಳವಡಿಸಿ, ಮೀನುಗಾರಿಕೆ ಮಾಡುವ ಸಾಂಪ್ರದಾಯಿಕ ನಾಡದೋಣಿಗಳಿಗೆ ಒದಗಿಸುತ್ತಿದ್ದ ಮಾಸಿಕ ತಲಾ 150 ಲೀಟರ್ ಸೀಮೆಎಣ್ಣೆ ಪ್ರಮಾಣವನ್ನು 300 ಅಟರ್ ಗೆ ಏರಿಸಿದ್ದರೂ, ಆ ಪ್ರಮಾಣದ ಸೀಮೆಎಣ್ಣೆಯನ್ನು ಹಂಚಿಕೆ ಮಾಡದೇ ಕೇವಲ ತಲಾ 150 ರಿಂದ 160 ಅಟರ್ ಸೀಮೆಎಣ್ಣೆ ಮಾತ್ರ ಪ್ರತಿ ತಿಂಗಳಿಗೆ ನಿಗದಿಪಡಿಸಿದೆ. ಆದರೆ 2021 ನೇ ನವೆಂಬರ್ ತನಕ ದೋಣಿಗಳಿಗೆ ಸೀಮೆ ಎಣ್ಣೆ ಹಂಚಿಕೆಯಾಗಿದೆ. 2021 ನೇ ಸಾಲನ ಡಿಸೆಂಬರ್ ನಿಂದ 2022 ರ ಮಾರ್ಚ ತನಕ ಕೇಂದ್ರದಿಂದ 5,115 ಕಿ.ಅಟರ್ (5,15,000 ಅಟರ್) ಸೀಮೆಎಣ್ಣೆ ಬಡುಗಡೆಯಾಗಬೇಕಾಗಿದ್ದು, ಇನ್ನೂ ಪೂರೈಕೆಯಾಗಿಲ್ಲ. ನಾಡದೋಣಿಗಳಿಗೆ ಕೇವಲ 9 ತಿಂಗಳು ಕ್ರಮವತ್ತಾಗಿ ಸೀಮೆಎಣ್ಣೆ ಹಂಚಿಕೆ ಮಾಡದೇ, ಅಷ್ಟೊ-ಇಷ್ಟೇ ಸೀಮೆಎಣ್ಣೆ ಹಂಚಿಕೆ ಮಾಡುತ್ತಿದ್ದಾರೆ. ಬೈಂದೂರು ಭಾಗದಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಮೀನುಗಾರರು ನಾಡದೋಣಿಯಲ್ಲಿಯೇ ಮೀನುಗಾರಿಕೆ ಮಾಡಿಕೊಂಡು ಸೀಮೆಎಣ್ಣಿ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ಚುನಾವಣಾ ಸಮಯದಲ್ಲಿ ಬಿಜೆಪಿಯವರು ಕೇಂದ್ರದಲ್ಲಿ, ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ (ಡಬ್ಬಲ್ ಇಂಜನ್ ಸರಕಾರ ) ಇದ್ದರೆ, ಮೀನುಗಾರರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತದೆ, ಮತ್ತು 300 ಅಟರ್ ವರೆಗೂ ಸೀಮೆಎಣ್ಣೆ ಕೊಡಿಸುತ್ತೇವೆ ಎಂದು ಘೋಷಣೆ ಮಾಡಿದ್ದು ಬಿಟ್ಟರೆ, ನಮ್ಮ ದೋಣಿಯ ಇಂಜನ್ ಗೆ ಸೀಮೆಎಣ್ಣೆ ದೊರಕಿಸಿಲ್ಲ. ಕರಾವಳಿ ಶಾಸಕರು, ಮೀನುಗಾರಿಕಾ ಮಂತ್ರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಸರಕಾರಕ್ಕೆ ಸೀಮೆಎಣ್ಣೆ ಬಗ್ಗೆ ಮನದಟ್ಟು ಮಾಡಿ ಸರಕಾರದಿಂದ ಕ್ರಮವಾಗಿ ಪ್ರತಿ ತಿಂಗಳು ನಿಗದಿಯಾದ ಸೀಮೆಎಣ್ಣೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವ ಬದಲು ವಿಳಂಬ ನೀತಿ ಅನುಸರಿಸುತ್ತಿದೆ.

ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಮಸ್ಯೆ ಬಗ್ಗೆ ಸರಕಾರ ಸ್ಪಂದಿಸದಿದ್ದರೆ, ಈ ಭಾಗದ ಶಾಸಕರು ಮೀನುಗಾರಿಕಾ ಮಂತ್ರಿಗಳೊಂದಿಗೆ ಕರಾವಳಿ ಭಾಗಕ್ಕೆ, ಮೀನುಗಾರಿಕಾ ಬಂದರುಗಳಿಗೆ, ಸಭೆ-ಸಮಾರಂಭಗಳಿಗೆ ಆಗಮಿಸುವ ವೇಳೆ, ಸಾವಿರಾರು ಮೀನುಗಾರರು ಸೇರಿ ಪ್ರತಿಭಟನೆ ನಡೆಸಬೇಕಾದಿತು. ಈ ಬಗ್ಗೆ ಜಿಲ್ಲಾಧಿಕಾರಿ ಕಛೇರಿ ಎದುರು ಸಮಸ್ತ ಮೀನುಗಾರರು ಸೇರಿ ನಮ್ಮ ಮೀನುಗಾರಿಕಾ ಉದ್ಯೋಗಕ್ಕೆ ಧಕ್ಕೆಯಾದ ಬಗ್ಗೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಬಿ. ನಾಗೇಶ್ ಖಾರ್ವಿ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Exit mobile version