Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಬ್ಯಾರೀಸ್ ಪದವಿ ಕಾಲೇಜು: ಐಟಿ ಕ್ಷೇತ್ರದ ಪ್ರಾಮುಖ್ಯತೆ ಮತ್ತು ವ್ಯಕ್ತಿತ್ವ ವಿಕಸನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ಐಟಿ ಘಟಕದ ವತಿಯಿಂದ ’ಐಟಿ ಕ್ಷೇತ್ರದ ಪ್ರಾಮುಖ್ಯತೆ ಮತ್ತು ವ್ಯಕ್ತಿತ್ವ ವಿಕಸನ’ ಕುರಿತು ಕಾರ್ಯಕ್ರಮ ನಡೆಯಿತು.

ಮೈಸೂರು ಜೆಎಸ್‌ಎಸ್ ಸೈನ್ನ್ ಆಂಡ್ ಟೆಕ್ನಾಲಜಿ ಯುನಿವರ್ಸಿಟಿ ಪ್ರೊಫೆಸರ್ ಡಾ. ಅನಿಲ್ ಕುಮಾರ್ ಬಿಸಿಎ ಕೋರ್ಸ್‌ನ ಪ್ರಾಮುಖ್ಯತೆ ಕುರಿತಾಗಿ ಮಾತನಾಡಿದರು.

ಇನ್ಫೋಸಿಸ್ ಕಂಪೆನಿಯ ಸೀನಿಯರ್ ಇಂಜಿನಿಯರ್, ಫಾತಿನ್ ಮಿಸ್ಬ ಇವರು ವ್ಯಕ್ತಿತ್ವ ವಿಕಸನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ತಂತ್ರಜ್ಞಾನ ಕ್ಷೇತ್ರದ ಹಲವು ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮೈಸೂರು ಸೈಂಟ್ ಜೋಸೆಫ್ ಸ್ಕೂಲ್ ಪ್ರಾಂಶುಪಾಲರಾದ ವೀಣಾ, ಮೇರಿ, ಸಂಸ್ಥೆಯ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು.

ಗಣಕ ವಿಜ್ಞಾನ ವಿಭಾಗದ ಮುಖ್ಕಸ್ಥೆ ನೂತನ ಇವರು ಅತಿಥಿ ಗಣ್ಯರನ್ನು ವಂದಿಸಿ ಉಪನ್ಯಾಸಕಿ ಹರ್ಷಿತಾ ಕಾಂiiಕ್ರಮ ನಿರೂಪಿಸಿದರು.

Exit mobile version