Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಳಾವರ: ಸ್ವಚ್ಚ ಗ್ರಾಮ ಅಭಿಯಾನಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಕಸ ಮುಕ್ತ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ಕಸ ಮುಕ್ತ ಗ್ರಾಮಕ್ಕೆ ಭಾನುವಾರ ವಕ್ವಾಡಿಯಲ್ಲಿ ಚಾಲನೆ ನೀಡಲಾಯಿತು.

ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ ಇವರು ವಕ್ವಾಡಿಯ ಸ್ನೇಹಜೀವಿ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರಿಗೆ ತ್ಯಾಜ್ಯ ಹಾಕುವ ಕೈ ಚೀಲಗಳನ್ನು ವಿತರಿಸಿ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭ ಘನ ತ್ಯಾಜ್ಯ ವಿಲೇವಾರಿಗಾಗಿ ಅಂಗಡಿ ಮತ್ತು ಮನೆಗಳಿಗೆ ಪಂಚಾಯತ್ ಸದಸ್ಯರ ತಂಡ ಭೇಟಿ ನೀಡಿ ಕೈ ಚೀಲಗಳನ್ನು ವಿತರಿಸಿ ಕಸ ಮುಕ್ತ ಗ್ರಾಮದ ಕುರಿತು ಮಾಹಿತಿ ನೀಡಲಾಯಿತು.

ಪಂಚಾಯತ್ ಉಪಾಧ್ಯಕ್ಷ ರಾಮಚಂದ್ರ ನಾವಡ, ಪಿಡಿಓ ಪಾಂಡುರಂಗ ಶೇಟ್, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ವಕ್ವಾಡಿ, ಭಾರತಿ, ಚಂದ್ರ ಪೂಜಾರಿ, ರಿಕ್ಷಾ ಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version