Kundapra.com ಕುಂದಾಪ್ರ ಡಾಟ್ ಕಾಂ

ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕುಂದಾಪುರ – ಬೈಂದೂರು ವಲಯ ಪದಪ್ರದಾನ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು
: ಯಡ್ತರೆ ಬಂಟರ ಭವನದಲ್ಲಿ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕುಂದಾಪುರ – ಬೈಂದೂರು ತಾಲೂಕು ವಲಯದ 27ನೇ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜರುಗಿತು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇದು ಬದಲಾವಣೆ ಯುಗವಾಗಿದ್ದು, ಪ್ರತಿಯೊಬ್ಬ ವೃತ್ತಿಪರರು ಹಾಗೂ ಸಂಘಟನೆಗಳು ಇಂದಿನ ವ್ಯವಸ್ಥೆಗೆ ತಕ್ಕಂತೆ ಬದಲಾಗಬೇಕು. ಸಾಮಾಜಿಕ ಬದುಕಲ್ಲಿ ಛಾಯಾಗ್ರಾಹಕರ ಜವಬ್ದಾರಿ ಮತ್ತು ಪಾತ್ರ ಬಹುಮುಖ್ಯವಾಗಿದೆ. ಸಂಘಟನೆಯಿಂದ ವೃತ್ತಿ ಬದುಕಿನಲ್ಲಿ ಇನ್ನಷ್ಟು ಶಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕೋವಿಡ್ ಸಂಕಷ್ಟ ಅನೇಕ ಉದ್ಯಮಕ್ಕೆ ಸಂಕಟ ನೀಡಿದೆ. ಅದರಲ್ಲಿ ಛಾಯಾಗ್ರಾಹಕರ ಬದುಕು ಕೂಡ ಹೊರತಾಗಿಲ್ಲ. ಇದರ ನಡುವೆಯೂ ಅತ್ಯತ್ತಮ ಕಾರ್ಯಕ್ರಮಗಳ ಮೂಲಕ ಸೌತ್ ಕೆನರಾ ಪೋಟೋಗ್ರಾಪರ್ಸ್ ಕುಂದಾಪುರ – ಬೈಂದೂರು ಘಟಕ ಸಾಮಾಜಿಕವಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು.

ನಿರ್ಗಮಿತ ಅಧ್ಯಕ್ಷ ರಾಜಾ ಮಠದಬೆಟ್ಟು ಈ ಸಾಲಿನ ನೂತನ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಷನ್ ದ.ಕ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಆನಂದ ಎನ್. ಬಂಟ್ವಾಳ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಉಪ್ಪುಂದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಉದಯ ಪಡಿಯಾರ್ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಛಾಯಗ್ರಾಹಕ ವೃತ್ತಿಬಾಂಧವರ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಎಸ್ .ರಾಜು ಪೂಜಾರಿ, ಬಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ, ಎಸ್.ಕೆ.ಪಿ.ಎ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಸಂಚಾಲಕ ನವೀನ್ ಕುಮಾರ್ ಕುದ್ರೋಳಿ, ಮಂಗಳೂರು ಎಸ್.ಕೆ.ಪಿ.ಎ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಗಣೇಶ ಕೆ., ಎಸ್.ಕೆ.ಪಿ.ಎ ಕುಂದಾಪುರ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಗೋಡೆ, ಸಲಹಾ ಸಮಿತಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕಾರ್ಯದರ್ಶಿ ಸುರೇಶ ಜಮದಗ್ನಿ, ಕೋಶಾಕಾರಿ ವಿಠಲ ನಾಗೂರು, ಉಪಾಧ್ಯಕ್ಷರಾದ ಶೀನ ದೇವಾಡಿಗ, ಪ್ರಕಾಶ ಹೆಗ್ಡೆ ಅಮಾಸೆಬಲು, ಚಂದ್ರಕಾಂತ ಕುಂದಾಪುರ, ರಾಘವೇಂದ್ರ ಭಟ್ ವಂಡ್ಸೆ, ಮೊದಲಾದವರು ಉಪಸ್ಥಿತರಿದ್ದರು. ರಾಜಾ ಮಠದಬೆಟ್ಟು ಸ್ವಾಗತಿಸಿದರು. ಸುರೇಶ ಮೊಳವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version