Kundapra.com ಕುಂದಾಪ್ರ ಡಾಟ್ ಕಾಂ

ಗೋಪಾಡಿ: ಮಹಿಳಾ ಮೀನುಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಯೂನಿಯನ್ ಬ್ಯಾಂಕ್ ಉಡುಪಿ ಡಿಜಿಎಂ ಡಾ. ಎಚ್.ಟಿ ವಾಸಪ್ಪ ಇವರು ಯೂನಿಯನ್ ಬ್ಯಾಂಕ್ ಗೋಪಾಡಿ ಶಾಖೆಯಲ್ಲಿ ಸಾಲ ಮಂಜೂರಾತಿ ಪತ್ರವನ್ನು ಶುಕ್ರವಾರ ವಿತರಣೆ ಮಾಡಿ ಶುಭ ಹಾರೈಸಿದರು.

ಇದೇ ಸಂದರ್ಭ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ರಮೇಶ ಕಾಂಚನ್ ಮಾತನಾಡಿ, ಈಗಾಗಲೇ ಬ್ಯಾಂಕಿನಿಂದ ಪ್ರಸ್ತುತ ಮಹಿಳಾ ಮೀನುಗಾರರಿಗೆ ಸುಮಾರು 6 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಸಂತಸ ತಂದಿದೆ. ಇದೇ ರೀತಿ ಮಹಿಳಾ ಮೀನುಗಾರರಿಗೆ ಬರಬೇಕಾದ ಬಾಕಿ ಇರುವ ಸಾಲ ಮನ್ನಾ ಮತ್ತು ಬಡ್ಡಿ ಸಹಾಯ ಧನವನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಬಗ್ಗೆ ಡಿಜಿಎಂ ಇವರಿಗೆ ಮನವಿ ಮಾಡಿದರು.

ಯೂನಿಯನ್ ಬ್ಯಾಂಕ್ ಗೋಪಾಡಿ ಶಾಖೆಯ ಮ್ಯಾನೇಜರ್ ಪವನ್‌ಕುಮಾರ ತೆಗ್ಗಿನ್, ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು, ಬ್ಯಾಂಕಿನ ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು.

Exit mobile version