Kundapra.com ಕುಂದಾಪ್ರ ಡಾಟ್ ಕಾಂ

ಕೇಂದ್ರ ಸರ್ಕಾರದ್ದು ಜನವಿರೋಧಿ ಬಜೆಟ್: ಕುಂದಾಪುರ, ಬೈಂದೂರಿನಲ್ಲಿ ಸಿಐಟಿಯು ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.06:
ಕೇಂದ್ರ ಸರ್ಕಾರದ ಜನ ವಿರೋಧಿ ಬಜೆಟ್ ವಿರುದ್ದ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸಿಐಟಿಯು ಸಂಚಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಸಿಐಟಿಯು ಸಂಚಾಲಕ ಎಚ್. ನರಸಿಂಹ ಮಾತನಾಡಿ, ಏಷ್ಯಾದ ಮೂರನೇ ದೊಡ್ಡ ಬಜೆಟ್ ಎಂದು ಬಣ್ಣಿಸಿ ಜನ ಸಾಮಾನ್ಯರಿಗೆ ಕೊಡಮಾಡುವ ಎಲ್ಲಾ ಹಣಕಾಸು ಕಡಿತ ಮಾಡಲಾಗಿದೆ. ಬಂಡವಾಳ ಹೂಡಿಕೆ ನೆಪದಲ್ಲಿ ದೇಶದ ಜನರ ಆಸ್ತಿ ಮಾರಾಟ ಮಾಡಿ ಕಾರ್ಪೋರೇಟ್ ಲೂಟಿಗೆ ಬಜೆಟ್ ಮಂಡಿಸಿರುವುದು ಸ್ಪಷ್ಟವಾಗಿದೆ. ರಸಗೊಬ್ಬರ, ಆಹಾರ, ಉದ್ಯೋಗ ಖಾತ್ರಿ, ಕೃಷಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಹಣ ಕಡಿತ ಮಾಡಿದ ಜನ ದ್ರೋಹಿ ಬಜೆಟ್ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮಹಾಬಲ ವಡೇರಹೋಬಳಿ,ಬಲ್ಕೀಸ್, ಪ್ರಕಾಶ್ ಕೋಣಿ,ಲಕ್ಷ್ಮಣ ನೇತೃತ್ವವ ವಹಿಸಿದ್ದರು. ಚಂದ್ರಶೇಖರ ವಿ. ಸ್ವಾಗತಿಸಿದರು. ರಾಜು ದೇವಾಡಿಗ ವಂದಿಸಿದರು.

ಬಜೆಟ್ ವಿರೋಧಿಸಿ ಕೃಷಿಕೂಲಿಕಾರರ ಪ್ರತಿಭಟನೆ:
ಬೈಂದೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ,ಕನಿಷ್ಟ ನೂರು ದಿನ ಉದ್ಯೋಗ ನೀಡಲು ರೂಪಾಯಿ 2.64 ಲಕ್ಷ ಕೋಟಿ ಹಣ ಈ ವರ್ಷದ ಬಜೆಟ್ ನಲ್ಲಿ ತೆಗೆದಿರಿಸಬೇಕಾಗಿತ್ತು. ಆದರೆ ನಮ್ಮ ಸರಕಾರ ಇಟ್ಟಿದ್ದು ಕೇವಲ ರೂಪಾಯಿ 73,000 ಕೋಟಿ. ಬಜೆಟ್ ನಲ್ಲಿ ನರೇಗಾ ಯೋಜನೆಗೆ ನಿರಂತರ ಅನುದಾನ ಕಡಿತ ಮಾಡುತ್ತಿರುವುದರಿಂದ ಕೂಲಿಕಾರರು ಊರು ತೊರೆದು ನಗರ ಪ್ರದೇಶಕ್ಕೆ ವಲಸೆ ಹೋಗುವ ಸನ್ನಿವೇಶ ನಿರ್ಮಾಣ ವಾಗುತ್ತಿದೆ.ಒಮ್ಮೆ ಕೆಲಸ ಪಡೆದು ಕೊಂಡವರು ಮತ್ತೊಮ್ಮೆ ಅರ್ಜಿ ಕೊಟ್ಟರೆ ಪಂಚಾಯತ್ ನವರ ಹುಬ್ಬು ಮೇಲೆರುತ್ತದೆ.ಕೆಲಸಕ್ಕಾಗಿ ತಿಂಗಳಾನುಗಟ್ಟಲೆ ಕಾಯಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘ(AIAWU)ದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಆತಂಕ ವ್ಯಕ್ತಪಡಿಸಿದರು.

ಬೈಂದೂರು ತಾಲುಕು ಕೆರ್ಗಾಲ್ ಗ್ರಾಮದ ಉದ್ಯೋಗ ಖಾತ್ರಿ ಕೆಲಸಗಾರರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ದಿನಾಂಕ:05=02=2022 ರಂದು ಅವರು ಮಾತನಾಡಿದರುಬೈಂದೂರು ತಾಲೂಕು ಡಿವೈಎಫ್ಐ ಮುಖಂಡರಾದ ಹರೀಶ್ ಬೈಂದೂರು ಹೋರಾಟ ಬೆಂಬಲಿಸಿ ಮಾತನಾಡಿದರು. ಬಿಜೂರು ಗ್ರಾಮದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮಂಜುನಾಥ ದೇವಾಡಿಗ ಇವರು ಉಪಸ್ಥಿತರಿದ್ದರು. ಕೃಷಿಕೂಲಿಕಾರರ ಸಂಘದ ಸ್ಥಳೀಯ ಮುಖಂಡರಾದ ಭಗವತಿ ಧನ್ಯವಾದ ನೀಡಿದರು.

Exit mobile version