Kundapra.com ಕುಂದಾಪ್ರ ಡಾಟ್ ಕಾಂ

ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಶಿರೂರಿನಿಂದ ಪಾದಯಾತ್ರೆ ಕೈಗೊಂಡ ಯುವಕರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಶಿರೂರು ಮೈದಿನಪುರದಿಂದ ಶಿರೂರು ಗ್ರಾಮ ಪಂಚಾಯತ್ ಸದಸ್ಯಉದಯ ಪೂಜಾರಿಯವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಯುವಕರ ತಂಡ ಭಾನುವಾರ ಪಾದಯಾತ್ರೆ ಮೂಲಕ ತೆರಳಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಗರಡಿ ಅದ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ಪಾದಯಾತ್ರೆ ಮೂಲಕ ಆಗಮಿಸಿದ ಯುವಕರಿಗೆ ಅಭಿನಂದನೆ ಸಲ್ಲಿಸಿ ಪಾದಯಾತ್ರೆಯ ನೇತೃತ್ವ ವಹಿಸಿದ ಉದಯ ಪೂಜಾರಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗರಡಿ ಅರ್ಚಕರಾದ ಗಣೇಶ್ ಪೂಜಾರಿ, ಪ್ರಮುಖರಾದ ಗಣೇಶ್ ಎಲ್. ಪೂಜಾರಿ, ಶಿವರಾಮ ಪೂಜಾರಿ, ಅಚ್ಚುತ್ ಬಿಲ್ಲವ, ಮಂಜು ಬಿಲ್ಲವ ಶಿರೂರು, ಅಣ್ಣಪ್ಪ ಪೂಜಾರಿ ಯಡ್ತರೆ, ಶೇಖರ್ ಪೂಜಾರಿ ಉಪ್ಪುಂದ, ಶಾಂತಾನಂದ ಪೂಜಾರಿ, ಮಂಜುನಾಥ ಪೂಜಾರಿ,ಚಂದ್ರ ಪೂಜಾರಿ, ಸುಧಾಕರ ಪೂಜಾರಿ, ಲೋಕೇಶ ಪೂಜಾರಿ, ಪ್ರವೀಣ್ ಗಾಣಿಗ, ಕಿಶನ್ ಪೂಜಾರಿ, ನಾಗರಾಜ ಪೂಜಾರಿ, ಕೋಟಿ ಪೂಜಾರಿ, ಸಂದೇಶ ಪೂಜಾರಿ, ವಿಜಯ ಪೂಜಾರಿ, ಬ್ರಹ್ಮೇಶ ಪೂಜಾರಿ, ಕಿರಣ್ ಪೂಜಾರಿ ಪೇಟೆ ಮುಂತಾದವರು ಉಪಸ್ಥಿತರಿದ್ದರು.

Exit mobile version