Kundapra.com ಕುಂದಾಪ್ರ ಡಾಟ್ ಕಾಂ

ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ತತ್ವಕಲಾ ಹೋಮ ಮತ್ತು ಕಲಶಾಭಿಷೇಕ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ದೇವಳದಲ್ಲಿ ತತ್ವಕಲಾ ಹೋಮ ಮತ್ತು ಕಲಶಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಜರುಗಿತು.

ದೇವತಾ ಪ್ರಾರ್ಥನೆ ಪೂರ್ವಕ ಕಲಶಸ್ಥಾಪನೆ, ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ ಮೊದಲಾದವುಗಳು ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೋಟ ಜಿ. ಸುಬ್ರಹ್ಮಣ್ಯ ಅಡಿಗರ ಅಧ್ವರ್ಯದಲ್ಲಿ ಹಾಗೂ ಪರ್ಯಾಯ ಅರ್ಚಕರ ನೇತೃತ್ವದಲ್ಲಿ ಜರುಗಿತು.

ಫೆಬ್ರವರಿ 14ರಂದು ದೇವಳದಲ್ಲಿ ವಾರ್ಷಿಕ ಮನ್ಮಹಾರಥೋತ್ಸವ ಜರುಗಲಿದ್ದು, ಫೆ.11ರಿಂದ 16ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.

Exit mobile version