ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 1970ರಲ್ಲಿ ಭಂಡಾರ್‌ಕಾರ‍್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಅಭಿಮಾನದಿಂದ ಪತ್ರ ಬರೆದಿದ್ದರು. ’ಲತಾ’ ಅವರು ಶೆಣೈಯವರ ಸಂಗೀತಾಭಿಮಾನಕ್ಕೆ ಸಂತೋಷಗೊಂಡು ಪತ್ರದೊಂದಿಗೆ ಸಹಿ ಹೊಂದಿದ್ದ ತಮ್ಮ ಫೋಟೋ ಸಹ ಕಳುಹಿಸಿದ್ದರು.
ಕುಂದಾಪುರದ ಶ್ರೀ ಗಣೇಶ್ ನೋವೆಲ್ಟಿಸ್‌ನ ಮಾಲಕರಾದ ಕೆ. ಜನಾರ್ಧನ ಶೆಣೈ ಹಲವು ಪ್ರಖ್ಯಾತ ಸಂಗೀತಗಾರರ ಪತ್ರ ಮತ್ತು ಛಾಯಾಚಿತ್ರ ಹೊಂದಿದ್ದು, ಲತಾ ಮಂಗೇಶ್ಕರ್ ಅವರ ಪತ್ರ ಮತ್ತು ಸಹಿ ಹಾಕಿದ ಫೋಟೋ ಐವತ್ತೆರಡು ವರ್ಷಗಳಿಂದ ಕಾಪಾಡಿಕೊಂಡು ಇಟ್ಟಿದ್ದಾರೆ.