Kundapra.com ಕುಂದಾಪ್ರ ಡಾಟ್ ಕಾಂ

ಸಿ.ಎ ಪರೀಕ್ಷೆಯಲ್ಲಿ‌ ಉದಯ ಪುತ್ರನ್ ಉತ್ತೀರ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ತಾಲೂಕಿನ ಹಕ್ಲಾಡಿಯ ಉದಯ ಪುತ್ರನ್ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಉಮೇಶ್ ಪುತ್ರನ್ ಹಾಗೂ ವಿನೋದಾ ದಂಪತಿಯ ಪುತ್ರನಾಗಿರುವ ಉದಯ ಪುತ್ರನ್ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಖಾಸಗಿ ಉದ್ಯೋಗವನ್ನು ನಿರ್ವಹಿಸುವ ಜೊತೆಗೆ ತಮ್ಮ ನಿರಂತರ ಸ್ವ‌-ಅಧ್ಯಯನ ಹಾಗೂ ಪರಿಶ್ರಮದ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.

Exit mobile version