ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯ ನೂತನ ಶಾಖೆಯು ಹೇರೂರು ಗ್ರಾಮದ ಯರುಕೋಣೆಯಲ್ಲಿ ಆರಂಭಗೊಂಡಿತು.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ರಾಜು ಪೂಜಾರಿಯವರು ಕಛೇರಿ ಉದ್ಘಾಟನೆ ಮಾಡಿ, ಸಾಮಾನ್ಯವಾಗಿ ಶಾಖೆಗಳನ್ನು ಆರಂಭಿಸುವಾಗ ಲಾಭಗಳಿಸುವ ಲೆಕ್ಕಾಚಾರ ಮಾಡಿ ಸುಗಮ ವ್ಯವಹಾರಕ್ಕೆ ಪೂರಕ ವಾತಾವರಣ ಹೊಂದಿದ ಸ್ಥಳ ಆಯ್ಕೆ ಮಾಡುತ್ತಾರೆ, ಆದರೆ ಸಹಕಾರಿಯ ಅಧ್ಯಕ್ಷರಾದ ಡಾ.ಎನ್ ಕೆ ಬಿಲ್ಲವರು ಹಾಗೆ ಯೋಚಿಸದೆ ತೀರಾ ಹಿಂದುಳಿದ ಪ್ರದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ದೃಷ್ಠಿಯಿಂದ ಯರುಕೋಣೆಯಲ್ಲಿ ಶಾಖೆ ಆರಂಭಿಸಿದ್ದಾರೆ. ಶಾಖೆಯು ಲಾಭದಾಯಕವಾಗಿ ಅಭಿವೃದ್ದಿ ಹೊಂದಲಿ ಎಂದು ಶುಭಕೋರಿದರು,
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಬಿ. ಎಮ್ ಸುಕುಮಾರ ಶೆಟ್ಟಿಯವರು ಭದ್ರತಾ ಕೊಠಡಿ ಉದ್ಘಾಟಿಸಿ ನೂತನ ಶಾಖೆಯು ಸಹಕಾರಿ ತತ್ವದಂತೆ ಗ್ರಾಮೀಣ ಜನತೆಯ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಸಂಸ್ಥೆಯು ಉನ್ನತಿ ಹೊಂದಲಿ ಎಂದು ಹಾರೈಸಿದರು. ಮಾಜಿ ಶಾಸಕರಾದ ಮಾನ್ಯ ಗೋಪಾ ಪೂಜಾರಿಯವರು ನೂತನ ಶಾಖೆಯು ಗಣಕೀಕರಣವನ್ನು ಚಾಲನೆ ಮಾಡಿ ಠೇವಣಿ ಪತ್ರ ಬಿಡುಗಡೆಗೊಳಿಸಿ ಸಹಕಾರಿ ಸಂಸ್ಥೆಗೆ ಮತ್ತು ಸದಸ್ಯರಿಗೆ ಶುಭಕೋರಿದರು.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಜಾನಪದ ವಿದ್ವಾಂಸ ಶ್ರೀ ಬನ್ನಂಜೆ ಬಾಬು ಅಮೀನ್ ಅವರಿಗೆ ಸಹಕಾರಿಯ ಅಧ್ಯಕ್ಷ ಡಾ. ಎನ್ ಕೆ ಬಿಲ್ಲವರು ಸನ್ಮಾನಿಸಿದರು. ಕಟ್ಟಡ ಮಾಲೀಕರಾದ ಸುರೇಶ್ ಪೂಜಾರಿಯವರಿಗೆ ಸನ್ಮಾನಿಸಲಾಯಿತು
ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಹಕ್ಕಾಡಿ ಜಗದೀಶ್ ಪೂಜಾರಿ, ಖಂಬದಕೋಣೆ ರೈ.ಸೇ.ಸ.ಸಂಘದ ನಿರ್ದೇಶಕರಾದ ಮೋಹನ್ ಪೂಜಾರಿ, ಹೇರೂರು ಪಂಚಾಯತ್ ಅಧ್ಯಕ್ಷರಾದ ಸುರೇಶ್ ನಾಯ್ಕ, ಪಂಚಾಯತ್ ಸದಸ್ಯರುಗಳಾದ ಶ್ರೀನಿವಾಸ ಪೂಜಾರಿ ಮತ್ತು ಸತೀಶ್ ಶೆಟ್ಟಿ ಉಪ್ರಳ್ಳಿ, ಉದ್ಯಮಿ ವೀರೇಂದ್ರ ಹೆಗಡೆ, ಬಿ ಎ ಹಂಝ ನಾವುಂದ, ರಮೇಶ್ ಮಾಚ ಹುಬ್ಬಳ್ಳಿ ಉದ್ಯಮಿಗಳು ಮುಂಬೈ, ಸಹಕಾರಿಯ ಉಪಾಧ್ಯಕ್ಷರಾದ ಶೇಖರ್ ಪೂಜಾರಿ, ನಿರ್ದೇಶಕರಾದ ಈಶ್ವರ್ ಖಾರ್ವಿ, ರಾಜೀವ್ ಎಮ್ ಶೆಟ್ಟಿ, ಮಂಜು ಪೂಜಾರಿ, ಶ್ರೀಮತಿ ಶುಭದಾ ಎನ್ ಬಿಲ್ಲವ ,ಪ್ರಮೋದ್ ಪೂಜಾರಿ, ಎನ್ ಸಿ ಅಸ್ಲಾಂ, ಸುರೇಶ್ ಕೆ ಪೂಜಾರಿ, ಶ್ರೀಮತಿ ಸಾವಿತ್ರಿ ಪೂಜಾರಿ, ಯೋಗೀಶ್ ಕಾರಂತ ಉಪಸ್ಥಿತರಿದ್ದರು. ( ವರ್ಚುವಲ್ ಮೀಟಿಂಗ್‌ನಲ್ಲಿ, ಶೀ ಶ್ಯಾಮ್ ಖೇತಾನಿ ಉದ್ಯಮಿ ಮುಂಬೈ, ಪಂಡಿತ್ ನವೀನಚಂದ್ರ ರಾಮ ಸನೀಲ್ ವಾಸ್ತು ತಜ್ಞರು ಮುಂಬೈ, ಶ್ರೀ ದಿನೇಶ್ ಎಮ್ ಕೊಟ್ಯಾನ್ ಮುಂಬೈ, ಶ್ರೀ ಜಾನ್ ಡೆವಿಸ್ ಮುಂಬೈ, ಧರ್ಮೇಶ್ ಎಸ್ ಸಾಲಿಯಾನ್ ಮ್ಯಾನೇಜಿಂಗ್ ಎಡಿಟರ್ ಮುಂಬೈ, ಸಮಾರಂಭಕ್ಕೆ ಜೊತೆಗೂಡಿದ್ದಾರೆ).
ಕೆ ಪುಂಡಲೀಕ ನಾಯಕ್ ಸ್ವಾಗತಿಸಿದರು, ಸಹಕಾರಿ ಅಧ್ಯಕ್ಷ ಡಾ. ಎನ್ ಕೆ ಬಿಲ್ಲವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಕಾರಿಯ ಮೇಲ್ವಿಚಾರಕ ಆರ್.ಕೆ.ಬಿಲ್ಲವ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂಜಾ ಟಿ. ಪೂಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.