Kundapra.com ಕುಂದಾಪ್ರ ಡಾಟ್ ಕಾಂ

ಸೌಕೂರು ಮೇಳದ ನೂತನ ಪ್ರಸಂಗ ‘ಪ್ರೇಮ ಸಂಘರ್ಷ’ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸೌಕೂರು ಇದರ ಈ ವರ್ಷದ ತಿರುಗಾಟದ ನೂತನ ಪ್ರಸಂಗ ಅಂಬಿಕಾ ವಕ್ವಾಡಿ ವಿರಚಿತ ಪ್ರೇಮ ಸಂಘರ್ಷ ಪ್ರಸಂಗವನ್ನು ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಪಿ ಶೇಖರ ಪೂಜಾರಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ನೂತನ ಪ್ರಸಂಗವನ್ನು ಮೇಳದ ಮುಖ್ಯ ಭಾಗವತ ರವಿ ಸುರಾಲ್ ಇವರಿಗೆ ಹಸ್ತಾಂತರಿಸಲಾಯಿತು. ಪದ್ಯ ರಚಿಸಿ ಕೊಟ್ಟ ದೇವದಾಸ ಈಶ್ವರ್ ಮಂಗಲ್ ಅವರನ್ನು ಸನ್ಮಾನಿಸಲಾಯಿತು.

ವಕೀಲ ಎಮ್.ಜಿ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ಕೋಡಿ ವಿಶ್ವನಾಥ್ ಗಾಣಿಗ ಉಪಸ್ಥಿತರಿದ್ದರು. ಮಹಾಬಲೇಶ್ವರ ಭಟ್ ಕ್ಯಾದಗಿ ಅವರು ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ವಕ್ವಾಡಿ ಸ್ವಾಗತಿಸಿದರು. ವಿ.ಜಿ ರಾಘವೇಂದ್ರ ಆಚಾರ್ ಕಾರ‍್ಯಕ್ರಮ ನಿರೂಪಣೆ ಮಾಡಿದರು.

Exit mobile version