Site icon Kundapra.com ಕುಂದಾಪ್ರ ಡಾಟ್ ಕಾಂ

‘ಆಳ್ವಾಸ್ ನ್ಯೂಸ್ ಇನ್ ಕ್ಯಾಪ್ಸೂಲ್’ ವರ್ಷಾಚರಣೆ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಪತ್ರಿಕೋದ್ಯಮ ಎನ್ನುವುದು ಅಭೂತಪೂರ್ವ ಶಕ್ತಿ. ಮಾಧ್ಯಮದ ವಿದ್ಯಾರ್ಥಿಗಳು ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ, ತಾವು ವಾಸಿಸುವ ಪರಿಸರದಲ್ಲಿ ನಡೆಯುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಮನೋಭಾವವನ್ನು ಎಳವೆಯಲ್ಲಿಯೇ ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ. ಜಿ. ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆಯ ವತಿಯಿಂದ ’ಆಳ್ವಾಸ್ ನ್ಯೂಸ್ ಇನ್ ಕ್ಯಾಪ್ಸೂಲ್’ ವ?ಚರಣೆ ಸಂಭ್ರಮವನ್ನು ನೆರವೇರಿಸಲಾಯಿತು.

ಕಾಲೇಜಿನಲ್ಲಿ ಈಗಾಗಲೇ ಪತ್ರಿಕೋದ್ಯಮ ವಿಭಾಗ ಸಾಕಷ್ಟು ಹೆಗ್ಗಳಿಕೆಯನ್ನು ಪಡೆದಿದೆ. ನಿರಂತರ ಚಟುವಟಿಕೆಯಿಂದ ವಿದ್ಯಾರ್ಥಿಗಳು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಇದು ಹೀಗೆ ಮುಂದುವರೆದು, ಅಭಿವ್ಯಕ್ತಿ ವೇದಿಕೆ ಮುಖಾಂತರ ಇನ್ನ? ಕಾರ‍್ಯಕ್ರಮಗಳು ಮೂಡಿ ಬರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ಎಸ್ಸಿ. ಆನಿಮೇಶನ್ ವಿಭಾಗದ ಮುಖ್ಯಸ್ಥ ರವಿ ಮೂಡುಕೊಣಾಜೆ ಮಾತಾನಾಡಿ, “ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ, ಆಗ ಮಾತ್ರ ಹೊಸತನ ಮೂಡಲು ಸಾಧ್ಯ” ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ‘ವಿದ್ಯಾರ್ಥಿಗಳ ಸತತ ಪರಿಶ್ರಮವೇ ನ್ಯೂಸ್ ಇನ್ ಕ್ಯಾಪ್ಸೂಲ್‌ನ ಯಶಸ್ಸಿಗೆ ಕಾರಣ. ಮುಂದಿನ ದಿನಗಳಲ್ಲಿ ಇದರ ಗುಣಮಟ್ಟ ಕಾಯ್ದುಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದರು.

ಸಂಭ್ರಮಾಚರಣೆಯ ಅಂಗವಾಗಿ ಕೇಕ್‌ನ್ನು ಕತ್ತರಿಸಲಾಯಿತು. ಪತ್ರಿಕೋದ್ಯಮದ ವಿದ್ಯಾರ್ಥಿಗಳಾದ ದುರ್ಗಾ ಪ್ರಸನ್ನ, ವೆನಿಷಾ, ಅನುಪಾ, ಹನುಮಂತು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ‍್ಯಕ್ರಮದಲ್ಲಿ ಆಳ್ವಾಸ್ ನ್ಯೂಸಿಯಂ ಸಂಯೋಜಕ ಶ್ರೀಕರ್ ಎಲ್ ಭಂಡಾರಕರ್, ಉಪನ್ಯಾಸಕರುಗಳಾದ ಡಾ ಸಫಿಯಾ, ಸುಶ್ಮಿತಾ, ನಿಶಾನ್, ಅಕ್ಷಯ್ ರೈ ಉಪಸ್ಥಿತರಿದ್ದರು. ನಳಿನಿ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

’ಆಳ್ವಾಸ್ ನ್ಯೂಸ್ ಇನ್ ಕ್ಯಾಪ್ಸುಲ್’ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಹೊರತರುವ ವಿಡೀಯೋ ಪ್ರಸ್ತುತಿಯಾಗಿದ್ದು, ಕಾಲೇಜಿನಲ್ಲಿ ನಡೆಯುವ ದೈನಂದಿನ ಚಟುವಟಿಕೆಗನ್ನು ಪ್ರಸಾರಮಾಡಲಾಗುತ್ತದೆ. ಅಲ್ಲದೆ ದೇಶ ವಿದೇಶಗಳ ಪ್ರಚಲಿತ ವಿದ್ಯಮಾನಗಳನ್ನು ೮-೯ ಸ್ಲೈಡ್ ಗಳಲ್ಲಿ ಬಿತ್ತರಿಸುತ್ತಲಾಗುತ್ತಿದೆ. ಇದು ಕಳೆದ ಒಂದು ವ?ದಿಂದ ನಿರಂತರವಾಗಿ ಮೂಡಿಬರುತ್ತಿದೆ.

Exit mobile version