Kundapra.com ಕುಂದಾಪ್ರ ಡಾಟ್ ಕಾಂ

ಜಾನಪದ ವಿದ್ವಾಂಸ ಶ್ರೀ ಬನ್ನಂಜೆ ಬಾಬು ಅಮೀನರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಾರಾಧನೆ ಮತ್ತು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರನ್ನು ಗೌರವಿಸಲಾಯಿತು.

ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷ ಡಾ. ಎನ್.ಕೆ. ಬಿಲ್ಲವ ಗೌರವಿಸಿ ಮಾತನಾಡಿ “ನಾವುಂದ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಹಲವಾರುಬಾರಿ ಆಗಮಿಸಿ, ವಾಸ್ತುವಿನ್ಯಾಸ, ಪಾರಂಪರಿಕ ವಿಚಾರಗಳ ಕುರಿತು ಸಲಹೆ ನೀಡಿದ್ದನ್ನು ನೆನಪಿಸಿಕೊಂಡು, ಅಮೀನರದು ನಿಜವಾದ ಅರ್ಥದಲ್ಲಿ ಹೋರಾಟದ ಬದುಕು, ಹಲವು ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಬೆರಗು ಹುಟ್ಟಸುವಂತಹದ್ದು, ಮುಂಬೈಯಲ್ಲಿ ನನ್ನ ನಿಕಟವರ್ತಿಗಳಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಶ್ರದ್ಧೆ, ಕುತೂಹಲ,ಆಸಕ್ತಿ, ನಿರಂತರ ಶ್ರಮ ಮತ್ತು ಸಂಸ್ಕೃತಿ ಪ್ರೀತಿಯಿಂದ ಹೇಗೆ ಅ¸Áಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂಬುದಕ್ಕೆ ಬನ್ನಂಜೆ ಬಾಬು ಅಮೀನರ ಜೀವನ ನಮಗೆಲ್ಲ ಮಾದರಿ ಎಂದರು”.

ಬಿ.ಎ.ಹಂಝಾ ನಾವುಂದ, ರಮೇಶ್ ಎಮ್. ಹುಬ್ಳಿ ಆಲೂರು, ಆಡಳಿತ ಮಂಡಳಿಯ ಸದಸ್ಯರು,ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Exit mobile version