Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಣ ಕೇವಲ ಓದು ಮತ್ತು ಬರಹಕ್ಕೆ ಸೀಮಿತವಾಗಬಾರದು: ಗುರು ಮಹಾಂತ ಸ್ವಾಮೀಜಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿಕ್ಷಣ ಕೇವಲ ಓದು ಮತ್ತು ಬರಹಕ್ಕೆ ಸೀಮಿತವಾಗಿರದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕು ಎಂದು ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠ ಮ. ನಿ. ಪ್ರ. ಗುರು ಮಹಾಂತ ಸ್ವಾಮೀಜಿ ಹೇಳಿದರು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಧರ್ಮದರ್ಶಿ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ನಿರ್ಮಾತೃ ದಿ. ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ತೃತೀಯ ವರ್ಷದ ಸಂಸ್ಮರಣೆ ಅಂಗವಾಗಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸೋಮವಾರ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಅಪ್ರಮೇಯ ಸ್ಮಾರಕ ಮತ್ತು ಮತಂಗವನ ಉದ್ಯಾನವನ ಉದ್ಘಾಟಿಸಿ ಮಾತನಾಡಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬ ಭಾವನೆ ಹೊಂದಿರಬಾರದು ಎಂಬ ಬಸವಣ್ಣನವರ ಮಾತನ್ನು ರಾಮಚಂದ್ರ ಭಟ್ಟರು ಜೀವನದಲ್ಲಿ ಅಕ್ಷರಶಃ ಅಳವಡಿಸಿಕೊಂಡಿದ್ದರು. ಸುಜ್ಞಾನವಂತ, ಸದ್ಭಾವಯುತ, ಸಂಸ್ಕಾರಯುತ ಮಕ್ಕಳ ಸಮಾಜಕ್ಕೆ ಕಟ್ಟಿಕೊಟ್ಟಿದ್ದಾರೆ ಎಂದರು.

ಅಪ್ರಮೇಯ ಸ್ಮಾರಕ ಉದ್ಘಾಟಿಸಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಸಂಚಾಲಕ ಚಂದ್ರಶೇಖರ ಭಟ್ ಮಾತನಾಡಿ, ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ಆಸೆ-ಆಕಾಂಕ್ಷೆಗಳು ಕೂಡಾ ಬೆಳೆಯುತ್ತಾ ಹೋಗುತ್ತದೆ. ಮನಸ್ಸು, ದೇಹ ಮತ್ತು ಬುದ್ಧಿ ಸರಿಯಾಗಿದ್ದಾಗ ಮಾತ್ರ ಒಬ್ಬ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ತಿಳಿಸಿದರು.

ಸಾಗರ ಮಾಜಿ ಶಾಸಕ ಎಲ್. ಟಿ. ತಿಮ್ಮಪ್ಪ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಡಾ. ಮ. ನಿ. ಪ್ರ. ಬಸವಲಿಂಗ ಸ್ವಾಮೀಜಿ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಹೆಚ್. ಬಾಲಚಂದ್ರ ಭಟ್, ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್. ನಾರಾಯಣ ರಾವ್ ಉಪಸ್ಥಿತರಿದ್ದರು.

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಶರಣ ಕುಮಾರ ಪ್ರಾಸ್ತಾವಿಕ ಮಾತನಾಡಿದರು. ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜ್ ಪ್ರಾಂಶುಪಾಲ ಡಾ. ನಾರಾಯಣ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ರಜನಿ ಕುಮಾರಿ, ಪವಿತ್ರಾ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ಗಜಮುಖ ಹರಿಹರ ಯಕ್ಷಗಾನ ಕಲಾ ವೇದಿಕೆ ಬಾರ್ಕೂರು ಬಾಲ ಕಲಾವಿದರಿಂದ ಧ್ರುವ ಚರಿತ್ರೆ ಯಕ್ಷಗಾನ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ನಡೆಯಿತು.

Exit mobile version