ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವಾರ್ಷಿಕ ವರ್ಧಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಅಖಂಡ ಭಜನೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.
ಭಾನುವಾರ ವರ್ಧಂತಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೋತ್ಸವಕ್ಕೆ ಚಾಲನೆ ಮೊದಲಾದ ಕಾರ್ಯಕ್ರಮಗಳು ನಡೆದರೆ ಸಂಜೆ 6 ಗಂಟೆಯಿಂದ ಶ್ರೀ ಮಹಾಸತಿ ಅಮ್ಮನವರ ದೇವಿಯ ನಗರೋತ್ಸವ, ಮಹಾಪೂಜೆ, ರಂಗಪೂಜೆ ಹಾಗೂ ವಿವಿಧ ಆಯ್ದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಿಗ್ಗೆ ಕಲಶಾಭಿಷೇಕ, ದೀಪ ವಿಸರ್ಜನೆ, ಮದ್ಯಾಹ್ನ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಭಜನಾ ಮಂಗಳೋತ್ಸವದ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡ, ದೇವಸ್ಥಾನದ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ,ಅಣ್ಣಪ್ಪ ಪೂಜಾರಿ (ಪಾತ್ರಿ), ಭಜನಾ ಉಸ್ತುವಾರಿಗಳಾದ ರಘುರಾಮ ಕೆ.ಪೂಜಾರಿ, ಕಿಶೋರ ಪೂಜಾರಿ ಸಸಿಹಿತ್ಲು, ಪ್ರಭಾಕರ ಟೀಚರ್, ಬಾಬು ಪೂಜಾರಿ, ಶಿಕ್ಷಕ ಮಂಜುನಾಥ ಬಿಲ್ಲವ ಕರಾವಳಿ ಉಪಸ್ಥಿತರಿದ್ದರು.