Site icon Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ಬೈಂದೂರು: 52 ಬಾರಿ ರಕ್ತದಾನ ಮಾಡಿದ ಪೈಯಾಜ್ ಅಲಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಜೆಸಿಐ ಬೈಂದೂರು ಸಿಟಿ ಇದರ ವತಿಯಿಂದ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 52 ಬಾರಿ ರಕ್ತದಾನ ಮಾಡಿದ ಬ್ಲಡ್ ಹೆಲ್ತ್ ಕೇರ್ ಕಾರ್ಯಕರ್ತರಾದ ಪೈಯಾಜ್ ಅಲಿ ಯೋಜನಾನಗರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವತ್ತಿನಕಟ್ಟೆ ಮಹಾಸತಿ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ವಿಜಯ ನರಸಿಂಹ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಕ್ತದಾನದ ಮಹತ್ವ ತಿಳಿಸಿದರು. ಅಧ್ಯಕ್ಷತೆಯನ್ನು ಜೆಸಿ ಸವಿತಾ ದಿನೇಶ್ ವಹಿಸಿದ್ದರು.

ಈ ಸಂಧರ್ಭದಲ್ಲಿ ಮಹಮ್ಮದ್ ಅಶ್ರಪ್, ಶ್ರೀಧರ ಆಚಾರ್ಯ, ಸೌಮ್ಯ ಬಿ, ಅನೂಪ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸತೀಶ್ ಎಂ. ಸ್ವಾಗತಿಸಿ ವಂದಿಸಿದರು.

Exit mobile version