Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಗರ್ಭಿಣಿ ಪತ್ನಿಗೆ ಸಿಗರೇಟಿನಿಂದ ಸುಟ್ಟು ಕಿರುಕುಳ ನೀಡಿದ್ದ ಪತಿ ಸೆರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗರ್ಭಿಣಿ ಪತ್ನಿಗೆ ಸಿಗರೇಟಿನಿಂದ ಸುಟ್ಟು ಕಿರುಕುಳ ನೀಡುತ್ತಿದ್ದ ಪತಿಯನ್ನು ಬಂಧಿಸಲಾಗಿದೆ. ವರದಕ್ಷಿಣೆ ಕಿರುಕುಳ ನೀಡುತ್ತಿರುವ ಬಗ್ಗೆ ಪತ್ನಿ ನೀಡಿದ ದೂರಿನಂತೆ, ತಲೆಮರೆಸಿಕೊಂಡಿದ್ದ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪತಿಯ ಕಿರುಕುಳದ ವಿರುದ್ಧ ಫೆ.26ರಂದು ಪತ್ನಿ ಪ್ರಿಯಾಂಕಾ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರೀತಿಸಿ ಮದುವೆಯಾದ ಪತಿ ನಾಲ್ಕೈದು ತಿಂಗಳಿನಲ್ಲಿ ವರದಕ್ಷಿಣೆಗಾಗಿ ಹಿಂಸೆ, ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ಪ್ರಿಯಾಂಕಾ ನೀಡಿದ ದೂರಿನಲ್ಲಿ, ಸಿಗರೇಟಿನಿಂದ ಸುಟ್ಟು ಗಾಯ ಮಾಡಿದ ಬಳಿಕ ಮಗುವನ್ನು ಕೊಲ್ಲುವುದಾಗಿ ಹೇಳಿ ಹೊಟ್ಟೆಗೆ ತುಳಿದಿದ್ದಾನೆ. ಈ ವೇಳೆಯಲ್ಲಿ ತಪ್ಪಿಸಿಕೊಂಡಿದ್ದರಿಂದ ಸೊಂಟಕ್ಕೆ ಪೆಟ್ಟು ತಗುಲಿದೆ. ಪತಿಯೇ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿ ನನ್ನ ಪೋಷಕರಿಗೆ ಕಳುಹಿಸಿ 2ಲ್ಷಕ ರೂ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ಮತ್ತು ಚಿನ್ನ ನೀಡದೇ ಇದ್ದಲ್ಲಿ ನನ್ನನ್ನು ಕೊಂದುಬಿಡುವುದಾಗಿ ಹೇಳಿ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ವಿವರಿಸಿದ್ದರು.

ಈ ನಡುವೆ ಆರೋಪಿ ಪ್ರದೀಪ್ ತನ್ನ ಪತ್ನಿ ಪ್ರಿಯಾಂಕಾಗೆ ಸಿಗರೇಟಿನಿಂದ ಮುಖಕ್ಕೆ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಫೆ.28ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ:
► ಗರ್ಭಿಣಿ ಪತ್ನಿಗೆ ಸಿಗರೇಟಿನಿಂದ ಸುಟ್ಟು ಕಿರುಕುಳ. ವೀಡಿಯೋ ವೈರಲ್ – https://kundapraa.com/?p=57859 .

Exit mobile version