ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ನಾಡ ಒಕ್ಕೂಟ ಕುಂದಾಪುರ ಘಟಕ ಮತ್ತು ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ಶಿಬಿರವು ಅಂಜುಮನ್ ನೂರುಲ್ ಇಸ್ಲಾಮ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯಲ್ಲಿ ಜರುಗಿತು.
ಮೌಲಾನಾ ಮೊಹಮ್ಮದ್ ಮುಝಮ್ಮಿಲ್ (ಖತೀಬರು, ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿ) ರವರ ಕಿರಾತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆ, ಕುಂದಾಪುರ ಆರೋಗ್ಯ ಮಿತ್ರ ಸುಜನ್ಮಾಲ ಆಯುಷ್ಮಾನ್ ಕಾರ್ಡ್ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ಸವಿವರವಾಗಿ ವಿವರಿಸಿದರು.
ತಾಲೂಕು ಅಧ್ಯಕ್ಷ ದಸ್ತಗೀರ್ ಕಂಡ್ಲೂರ್ ರವರ ಅಧ್ಯಕ್ಷತೆ ವಹಿಸಿದ್ದರು. ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ, ಕುಂದಾಪುರ ಘಟಕದ ಸಂಘಟನಾ ಕಾರ್ಯದರ್ಶಿ ಮುಜಾಹಿದ್ ನಾಖುದಾ, ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿ ಇದರ ಅಧ್ಯಕ್ಷರಾದ ಪಿ.ಎಮ್. ಹಸನೈರ್, ಬಿ.ಎಸ್.ಎಫ್ ಫಿಶರೀಸ್ ರಫೀಕ್ ಗಂಗೊಳ್ಳಿ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ, ನಮ್ಮ ನಾಡ ಒಕ್ಕೂಟ ಉಡುಪಿ ಯುವ ಘಟಕದ ಅಧ್ಯಕ್ಷ ರೆಹಾನ್ ತ್ರಾಸಿ, ಕುಂದಾಪುರ ತಾಲೂಕು ಘಟಕದ ಉಪಾಧ್ಯಕ್ಷರಾದ ಝಹೀರ್ ನಾಖುದಾ ಗಂಗೊಳ್ಳಿ ಮತ್ತು ಗಂಗೊಳ್ಳಿ ಜಮಾತಿನ ಸದಸ್ಯರು ಉಪಸ್ಥಿತರಿದ್ದರು. ಕುಂದಾಪುರ ಘಟಕದ ಕಾರ್ಯದರ್ಶಿ ಬಿ.ಎಮ್. ನಾಸಿರ್ ಮೂಡ್ ಗೋಪಾಡಿ ವಂದಿಸಿದರು.
ಬಾಲ ಮಿತ್ರಾ 2020-21 ಸಾಧನೆಗೈದ ಖಲೀಫೆ ಮೊಹಮ್ಮದ್ ಸಹೂದ್ ನ ಸನ್ಮಾನಿಸಲಾಯಿತು. ಜಯೀಮ್ ಗಂಗೊಳ್ಳಿ, ಅಬ್ದುಲ್ ಹಮೀದ್ ಗಂಗೊಳ್ಳಿ, ನಿಯಾಝ್ ನಾವುಂದ, ಮುಸ್ತಫಾ ನಾವುಂದ, ಅನ್ಫಾಲ್ ಗಂಗೊಳ್ಳಿ, ಅಶೀರ್ ಗಂಗೊಳ್ಳಿ, ಫೈಝಾನ್ ಗಂಗೊಳ್ಳಿ ಮತ್ತು ನಯಾಝ್ ಗಂಗೊಳ್ಳಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಸಹಾರಾ ಎಂಟರ್ಪೈಸಸ್ ನ ಅತಾವುರ್ ರೆಹ್ಮಾನ್ ಗಂಗೊಳ್ಳಿ ಆಯುಷ್ಮಾನ್ ಹಾಗೂ ಈ-ಶ್ರಮ್ ಕಾರ್ಡ್ ಕಾರ್ಡ್ ಮಾಡಿಕೊಟ್ಟರು.