Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಯುವ ರೆಡ್‌ಕ್ರಾಸ್ ಘಟಕ: ರಕ್ತದಾನ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಎನ್.ಸಿ.ಸಿ., ಎನ್.ಎಸ್.ಎಸ್., ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಜೈ ಕುಂದಾಪುರ ಸೇವಾ ಟ್ರಸ್ಟ್-ಕುಂದಾಪುರ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ ಜರಗಿತು.

ಇಂಡಿಯನ್ ರೆಡ್‌ಕ್ರಾಸ್ ಘಟಕದ ಚೇರ್‌ಮನ್ ಜಯಕರ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು, ಕಾರ್ಯದರ್ಶಿಗಳಾದ ಸೀತಾರಾಮ್ ಶೆಟ್ಟಿ, ಜನೌಷಧಿ ಉಸ್ತುವಾರಿ ಗಣೇಶ್ ಆಚಾರ್, ಸದಸ್ಯರಾದ ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಲಯನ್ಸ್ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕಲ್ಪತರು, ಸದಸ್ಯರಾದ ನವೀನ್ ಶೆಟ್ಟಿ, ಜೈ ಕುಂದಾಪುರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪುಂಡಲೀಕ ಮೊಗವೀರ ಮತ್ತು ತಂಡದವರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ, ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್, ಸಹ ಸಂಯೋಜಕಿ ಮಾಲತಿ ಕುಂದರ್, ಎನ್.ಸಿ.ಸಿ. ಘಟಕದ ಸಂಯೋಜಕರಾದ ಶಿವರಾಜ್ ಸಿ ಮತ್ತು ಸುಜಯ್, ಎನ್.ಎಸ್.ಎಸ್. ಸಂಯೋಜಕರಾದ ಪ್ರವೀಣ್ ಮೊಗವೀರ ಮತ್ತು ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು, ಬ್ಯುಸಿನೆಸ್ ಆಡ್ಮಿನಿಸ್ಟ್ರೇಶನ್ ವಿಭಾಗದ ಮುಖ್ಯಸ್ಥರಾದ ನಂದಾ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ೧೪೩ ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Exit mobile version