Site icon Kundapra.com ಕುಂದಾಪ್ರ ಡಾಟ್ ಕಾಂ

ಲಾರಿ ಚಾಲಕನಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಆರೋಪ. ದೂರು ದಾಖಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ.ಮಾ.10:
ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ಕಾರು ಚಾಲಕನೋರ್ವ ಹಲ್ಲೆಗೈದ ಘಟನೆ ತಾಲೂಕಿನ ಅಸೋಡು ಎಂಬಲ್ಲಿ ನಡೆದಿದೆ. ಮಾ.4ರಂದು ಈ ಘಟನೆ ನಡೆದಿದ್ದು, ಇಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ಅನ್ನಭಾಗ್ಯದ ಅಕ್ಕಿ ಸಾಗಾಟ ಮಾಡುವ ಲಾರಿ ಚಾಲಕ ಮಹಮ್ಮದ್ ಇಸಾಕ್ ಎಂಬುವವರಿಗೆ, ಅಸೋಡು ನಂದಿಕೇಶ್ವರ ದೈವಸ್ಥಾನದ ಕಮಾನು ಬಳಿ ರಿಟ್ಸ್ ಕಾರಿನ ಚಾಲಕ ತನ್ನ ಕಾರನ್ನು ಅಡ್ಡ ತಂದು ನಿಲ್ಲಿಸಿ ಏಕಾಏಕಿ ಹಲ್ಲೆಗೈದಿದ್ದಾನೆ. ಸಾರ್ವಜನಿಕರು ತಡೆಯುತ್ತಿದ್ದರೂ ಕಾರು ಚಾಲಕ ಲಾರಿ ಚಾಲಕನಿಗೆ ಹಲ್ಲೆಗೈದಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version