Kundapra.com ಕುಂದಾಪ್ರ ಡಾಟ್ ಕಾಂ

ಮಂಗಳವಾರ ಹಿಜಾಬ್ ವಿವಾದದ ತೀರ್ಪು: ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾ.15ರ ಮಂಗಳವಾರ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಹಿಜಾಬ್ ವಿವಾದ ಆರಂಭಗೊಂಡ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ತೀರ್ಪು ಹೊರ ಬೀಳುವ ದಿನದಂದು ರಜೆ ಘೋಷಣೆ ಮಾಡಲಾಗಿದೆ. ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಹಾಗೂ ಯಾವುದೇ ಪ್ರಮುಖವಾದ ಪರೀಕ್ಷೆಗಳಿದ್ದಲ್ಲಿ ಅದನ್ನು ನಡೆಸಲು ವಿನಾಯಿತಿ ನೀಡಲಾಗಿದೆ.

ಸಭೆ ಸಮಾರಂಭಕ್ಕಿಲ್ಲ ಅವಕಾಶ:
ಅಲ್ಲದೇ ಯಾವುದೇ ಸಂಭ್ರಮಾಚರಣೆ, ಸಾರ್ವಜನಿಕ ಸಭೆ, ಪ್ರತಿಭಟನೆ, ಮೆರವಣಿಗೆ, ವಿಜಯೋತ್ಸವವನ್ನು ನಿಷೇಧಿಸಿ ಐಪಿಸಿ ಸೆಕ್ಷನ್ 144 ರಂತೆ ನಿಷೇಧಾಜ್ಞೆಯನ್ನು ಮುಂದಿನ ಆದೇಶದ ತನಕ ಹೊರಡಿಸಲಾಗಿದೆ.

Exit mobile version