ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿವಿಧ ಸಾಮ್ರಾಜ್ಯಗಳ ಸ್ಥಾಪನೆಯಲ್ಲೂ ಸುಶಾಸನ ನಲೆಸುವಂತೆ ಮಾಡುವಲ್ಲಿಯೂ ಸಾವಿರಾರು ವರ್ಷಗಳಿಂದ ಆಳುವ ಪ್ರಭುಗಳಿಗೆ ಸಲಹೆ ನೀಡುತ್ತಾ ಸ್ಪೂರ್ತಿಯ ಸೆಲೆಯಾಗಿ ಲೋಕ ಹಿತಕ್ಕಾಗಿ ಶ್ರಮಿಸುತ್ತಾ ಬಂದಿದೆ ವಿಪ್ರ ಸಮಾಜ. ಬದಲಾದ ಇಂದಿನ ಕಾಲ ಘಟ್ಟದಲ್ಲಿ ಸನಾತನ ಧರ್ಮ ಹಲವು ವಿಧದ ದಾಳಿ ಎದುರಿಸುತ್ತಿದೆ. ಸದಾಚಾರ, ಸಂಪನ್ನರಾಗಿ ಸಂಸ್ಕಾರ ಯುತ ಬದುಕನ್ನ ಅನುಸರಿಸುವ ಮೂಲಕ ದೇಶ, ಸಮಾಜ ಮತ್ತು ಧರ್ಮ ರಕ್ಷಣೆಗೆ ನಮ್ಮ ಕೊಡುಗೆ ನೀಡಬೇಕು ಎಂದು ಲೇಖಕ, ನಿವೃತ್ತ ಸೈನಿಕ ಬೈಂದೂರು ಚಂದ್ರಶೇಖರ ನಾವುಡ ಹೇಳಿದರು.
ಅವರು ಉಪ್ಪುಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ೨೭ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.
ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ಆನಂತಪದ್ಮನಾಭ ಬಾಯರಿ ಜ್ಯೋತಿ ಬೆಳಗಿಸಿ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಾ ನೂತನವಾಗಿ ರಚನೆಯಾಗಿರುವ ಕರ್ನಾಟಕ ಸರಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಆರ್ಥಿಕವಾಗಿ ಬಹಳ ಅನೂಕೂಲತೆಗಳಿದ್ದು ಅದರ ಸದುಪಯೋಗವನ್ನು ಸಮಾಜದವರು ಪಡೆದುಕೊಂಡು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಹಾಗೂ ಈ ಬಗ್ಗೆ ಪೂರಕ ಮಾಹಿತಿಗಳನ್ನು ಒದಗಿಸುವ ಕಾರ್ಯ ಸಂಘಟನೆಗಳಿಂದ ಆಗಬೇಕು ಎಂದು ಕರೆ ನೀಡಿದರು. ೨೦೨೧ ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ವಲಯಕ್ಕೆ ಹೆಚ್ಚು ಅಂಕಗಳಿಸಿದ ಶ್ರೇಯಸ್ ರಾವ್, ಶ್ರೀಶಾಂತ್ ಉಡುಪ ಹಾಗೂ ಪಿಯುಸಿಯಲ್ಲಿ ಸ್ಕಂದ ಬಿ. ಹೆಚ್, ಯು. ಅಭಯ ಮಯ್ಯ, ಲಕ್ಷ್ಮೀನಾರಾಯಣ ಕಾರಂತ್ ಅವರುಗಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಉಪ್ಪುಂದ ವಲಯದ ಅಧ್ಯಕ್ಷ ಯು. ಸಂದೇಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸಾಹಿತಿ ಯು. ರಮೇಶ ವೈದ್ಯ ಮುಖ್ಯ ಅತಿಥಿಯಾಗಿದ್ದರು, ಗೌರವಾಧ್ಯಕ್ಷ ಬಿ. ವಿಶ್ವೇಶ್ವರ ಅಡಿಗ, ಕಾರ್ಯದರ್ಶಿ ಅರುಣಕುಮಾರ ಶ್ಯಾನುಬೋಗ್, ಕೋಶಾಧ್ಯಕ್ಷ ಹೆಚ್ ಜಗದೀಶ್ ರಾವ್, ಮಹಿಳಾವೇದಿಕೆ ಅಧ್ಯಕ್ಷೆ ಸುಮತಿ ಮೆರ್ಟಾ, ಯುವ ವೇದಿಕೆ ಅಧಕ್ಷ ಪದ್ಮನಾಭ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಹೇಮಾ ಹೊಳ್ಳಾ ಪ್ರಾರ್ಥಿಸಿದರು, ಅರುಣಕುಮಾರ ಶ್ಯಾನುಭೋಗ್ ಸ್ವಾಗತಿಸಿದರು ಹೆಚ್. ಜಗದೀಶ ರಾವ್ ವಂದಿಸಿದರು, ಪ್ರಶಾಂತ ಮಯ್ಯ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಬೈಂದೂರು ತಾಲೂಕು ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ವಿ. ಪ್ರಕಾಶ್ ಐತಾಳ್ ಹಾಗೂ ಹಿರಿಯ ಭಜನಾ ಹಾಡುಗಾರ್ತಿ ವೀಣಾ ಶಾನುಭಾಗ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಲೆಕ್ಕಪರಿಶೋಧನ ಉಪನಿರ್ದೇಶಕರಾದ ಬಿ. ಗಣೇಶ ಮಯ್ಯ, ಉದ್ಯಮಿ ಕೆ. ಉಮೇಶ ಶಾನುಭೋಗ್ ಕಾರ್ಯಕ್ರಮದ ಪ್ರಯೋಜಕರಾದ ಕರ್ನಾಟಕ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಸುಭಾಶ್ಚಂದ್ರ ಪುರಾಣಿಕ್ ಉಪ್ಪುಂದ, ಬಿಎಸ್‌ಎನ್‌ಎಲ್ ನಿವೃತ್ತ ಎಜಿಎಂ ಸತ್ಯನಾರಾಯಣ ಪುರಾಣಿಕ್ ಉಪ್ಪುಂದ, ತಾಲೂಕು ಬ್ರಾಹ್ಮಣ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ವಿಪ್ರೋ ಇಂಡಿಯಾ ಮಣಿಪಾಲ್‌ನ ಮಂಜುನಾಥ ಮಯ್ಯ ಕೊಳದಹಿತ್ಲು ಉಪ್ಪುಂದ, ತಾಲೂಕು ಮಹಿಳಾ ವೇದಿಕೆ ಅಧಕ್ಷೆ ಭಾವನಾ. ಎಂ ಭಟ್ ಮುಖ್ಯ ಅಥಿತಿಗಳಾಗಿದ್ದರು, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಆರ್ಥಿಕವಾಗಿ ಹಿಂದೂಳಿದ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು, ವಲಯಾಧ್ಯಕ್ಷ ಯು. ಸಂದೇಶ ಭಟ್ ಅಧ್ಯಕ್ಷತೆ ವಹಿಸಿದ್ದರು, ಗೌರವಾಧ್ಯಕ್ಷ ಬಿ. ವಿಶ್ವೇಶ್ವರ ಅಡಿಗ, ಅರುಣ ಕುಮಾರ ಶ್ಯಾನುಭೋಗ್, ಹೆಚ್. ಜಗಧೀಶ ರಾವ್, ಸುಮಾತಿ ಮೆರ್ಟಾ, ಪದ್ಮನಾಭ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ದೀಟಿ ಸೀತಾರಾಮ ಮಯ್ಯ ಸ್ವಾಗತಿಸಿದರು, ಕುಮಾರಿ ರಂಜನಾ ಪ್ರಾರ್ಥಿಸಿದರು, ಅರುಣಕುಮಾರ ಶ್ಯಾನುಭೋಗ್ ವಂ
ದಿಸಿದರು. ಪ್ರಶಾಂತ ಮಯ್ಯಾ ಕಾರ್ಯಕ್ರಮ ನಿರೂಪಿಸಿದರು ಅತಿಥ್ಯದ ಪ್ರಾಯೋಜಕರಾದ ಸುಭಾಶ್ಚಂದ್ರ ಪುರಾಣಿಕ್, ಸತ್ಯನಾರಾಯಣ ಪುರಾಣಿಕ್ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಗಿತು. ಇದಕ್ಕು ಮೊದಲು ನೆಡೆದ ಮಹಾ ಸಭೆಯಲ್ಲಿ ಕಳೆದ ಸಾಲಿನ ವರದಿ ವಾಚಿಸಲಾಯಿತು, ಲೆಕ್ಕಪತ್ರ ಮಂಡಿಸಿ ಅನುಮೊದನೆ ಪಡೆಯಲಾಯಿತು. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು, ಅಧ್ಯಕ್ಷರಾಗಿ ಅರುಣ್ ಕುಮಾರ್ ಶ್ಯಾನುಭೋಗ್, ಕಾರ್ಯದರ್ಶಿಯಾಗಿ ಪ್ರಶಾಂತ್ ಮಯ್ಯ ಇವರು ಆಯ್ಕೆಯಾದರು ಕಾರ್ಯಕ್ರಮದ ಕೊನೆಯಲ್ಲಿ ಶಾಂತಿ ಮಂತ್ರಪಠಿಸಲಾಯಿತು.