Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಸಿ.ಸಿ.ಕ್ಯಾಮೆರಾ ಹಾಗೂ ಸೋಲಾರ್ ಲೈಟ್ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ನಿರಂತರ ಚಟುವಟಿಕೆಗಳನ್ನು ಕಂಡು ಬೆಂಗಳೂರಿನ ಉದ್ಯಮಿ ನಾರಾಯಣ ಹರಿದಾಸ್ ಕಾಮತ್ ರವರು ಸಿ.ಸಿ.ಕ್ಯಾಮೆರಾ ಹಾಗೂ ಟಾಟಾ ಮೋಟರ್ ಫೈನಾನ್ಸ್ ಉಪಾಧ್ಯಕ್ಷರಾದ ಸುಜೀರ್ ಲಕ್ಷ್ಮೀನಾರಾಯಣ ನಾಯಕ್ ಸೋಲಾರ್ ಲೈಟ್‌ನ್ನು ಕೊಡುಗೆಯಾಗಿ ನೀಡಿದ್ದಾರೆ.

ಇವರಿಬ್ಬರನ್ನೂ ಇತ್ತೀಚೆಗೆ ಗೊಂಬೆಯಾಟ ಅಕಾಡೆಮಿಯ ವತಿಯಿಂದ ಗೊಂಬೆ ಮನೆಯಲ್ಲಿ ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು ,ಕನ್ನಡ ಸಾಹಿತ್ಯ ಪರಿಷತ್ತು ,ರಘುನಾಥ್ ನಾಯಕ್, ಮಾಜಿ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್, ಕೊಂಕಣ್ ರೈಲ್ವೆ , ಪ್ರೊ. ವರದೇಶ್ ಹಿರೇಗಂಗೆ, ಮುಖ್ಯಸ್ಥರು, ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆಟ್ಸ್ ಆಂಡ್ ಸೈನ್ಸ್, ಮಾಹೆ, ಮಣಿಪಾಲ, ನಿವೃತ್ತ ಉಪನ್ಯಾಸಕ ಪ್ರೊ. ವೆಂಕಟೇಶ್ ಪೈ, ಪತ್ರಿಕೆ ವರದಿಗಾರರಾದ ಜಾನ್ ಡಿ’ಸೋಜಾ, ಕಾಸರಗೋಡಿನ ಉದ್ಯಮಿ ಸದಾಶಿವ ಭಟ್, ಮಣಿಪಾಲದ ಪನವಾರ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಜ್ಞಾನದೇವ ಮಲ್ಯ ಮುಂತಾದ ಗಣ್ಯರ ಸಮ್ಮಖದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರು ಸನ್ಮಾನಿಸಿದರು.

Exit mobile version