Kundapra.com ಕುಂದಾಪ್ರ ಡಾಟ್ ಕಾಂ

ಗುಣಾತ್ಮಕ ಶಿಕ್ಷಣದ ಗುರಿ, ಶೈಕ್ಷಣಿಕ ಸಾಧನೆಗೆ ರಹದಾರಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು

ಕುಂದಾಪ್ರ ಡಾಟ್ ಕಾಂ | ಕಾಲೇಜು ಪ್ರಕಟಣೆ
ಯುವ ಪೀಳಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನ ವೇಗದೊಂದಿಗೆ ಹೆಜ್ಜೆಯಿರಿಸಲು, ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಬಹುಮುಖ್ಯ. ಕಾಲದ ಅವಶ್ಯಕತೆಯನ್ನು ಅರಿತು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಭವಿಷ್ಯದ ಶ್ರೇಷ್ಠ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿಯೊಂದಿಗೆ, ರೂಪುಗೊಂಡ ದಕ್ಷ ತಂಡ ವರ್ಷದಿಂದ ಸಮರ್ಪಣಾ ಎಜುಕೇಶನ್ ಟ್ರಸ್ಟ್ (ರಿ) ಎಂಬ ಸಂಸ್ಥೆಯ ಮೂಲಕ ಜೊತೆಸೇರಿದೆ.

ಕುಂದಾಪುರ ತಾಲೂಕಿನ ಹೆಮ್ಮಾಡಿಯ ಹೃದಯ ಭಾಗದಲ್ಲಿರುವ ಜನತಾ ಸ್ವತಂತ್ರ್ಯ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನಿಂದ ಸಮರ್ಪಣಾ ಎಜುಕೇಶನ್ ಟ್ರಸ್ಟ್ ನೇತೃತ್ವಲ್ಲಿ ಮುನ್ನಡೆಯುತ್ತಿದ್ದು; ದಕ್ಷ ಆಡಳಿತ ಮಂಡಳಿ, ಅನುಭವಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದ ನೇತೃತ್ವದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆಯಲು ಸಜ್ಜಾಗಿದೆ.

ಆಡಳಿತ ಮಂಡಳಿ:
ಅನುಭವಿ ಹಾಗೂ ಬೋಧನೆಯಲ್ಲಿ ಪ್ರಸಿದ್ಧಿ ಪಡೆದಿರುವ ನಾಲ್ವರು ಉಪನ್ಯಾಸಕರು ಸೇರಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಸದಾಶಯದೊಂದಿಗೆ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ರಚಿಸಿ ಆ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಪಣತೊಟ್ಟಿದ್ದಾರೆ. ಅದರಂತೆ ವಿ.ವಿ.ವಿ. ಮಂಡಳಿ 2007-08ರಲ್ಲಿ ಆರಂಭಿಸಿದ ಜನತಾ ಸ್ವತಂತ್ರ ಪಿಯು ಕಾಲೇಜನ್ನು ಪ್ರಸಕ್ತ ಸಾಲಿನಿಂದ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ಮುನ್ನಡೆಸಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿರುವ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕರಾಗಿದ್ದ ಹಿರಿಯ ಚಿತ್ರಾ ಕಾರಂತ್ ಅವರು ಈ ಸಂಸ್ಥೆಯ ಮಾರ್ಗದರ್ಶಕರಾಗಿದ್ದಾರೆ. ಹಲವು ವರ್ಷಗಳ ಶೈಕ್ಷಣಿಕ ಹಾಗೂ ನಿರ್ವಹಣೆಯ ಅನುಭವ ಹೊಂದಿರುವ ಗಣೇಶ್ ಮೊಗವೀರ ಅವರು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಮಂಜುನಾಥ ಗಾಣಿಗ, ಕಾರ್ಯದರ್ಶಿಯಾಗಿ ಸುನಿಲ್ ಚಿತ್ತಾಲ್, ಕೋಶಾಧಿಕಾರಿ ಕಾರ್ತಿಕೇಯ ಎಮ್. ಎಸ್. ಹಾಗೂ ಆಡಳಿತ ಅಧಿಕಾರಿ – ದೈಹಿಕ ಶಿಕ್ಷಣ ನಿರ್ದೇಶಕರು ಪ್ರದೀಪ್ ಶೆಟ್ಟಿ ಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿರಂತರ ಬದ್ಧತೆಯೊಂದಿಗೆ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಆರಂಭವಾದ ಕಾಲೇಜು, ಪದವಿಪೂರ್ವ ಹಂತದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ.ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಶಿಕ್ಷಣ ನೀಡಲು ಸಜ್ಜಾಗಿದೆ. ವಿಜ್ಞಾನ ವಿಭಾಗದಲ್ಲಿ PCMB, PCMC, PCMS, ಹಾಗೂ ವಾಣಿಜ್ಯ ವಿಭಾಗದಲ್ಲಿ CEBA, SEBA ಹಾಗೂ BEBA ಪಠ್ಯಕ್ರಮ ವಿಭಾಗಗಳನ್ನು ಹೊಂದಿದೆ. ಶಿಸ್ತು, ಅಚ್ಚುಕಟ್ಟುತನ, ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಮಕ್ಕಳ ಆಂತರ್ಯದಲ್ಲಿ ಬಿತ್ತುವ ಮೂಲಕ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಶಿಕ್ಷಣ ನೀಡಲು ಸಜ್ಜಾಗಿದೆ.

ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಜೊತೆ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಉದ್ದೇಶವನ್ನಿಟ್ಟುಕೊಂಡು ಅನೇಕ ಸೃಜನಶೀಲ ಚಟುವಟಿಕೆಗಳನ್ನು ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳ ಚಿತ್ತ ಭಿತ್ತಿಯಲ್ಲಿ ಚಿಗುರೊಡೆಯುವ ಆಲೋಚನೆಗಳಿಗೆ ಪುಷ್ಟಿ ನೀಡಿ ಬಲಪಡಿಸುವ ಉದ್ದೇಶದಿಂದ, ಕೇವಲ ಓದಿಗಷ್ಟೆ ಸೀಮಿತವಾಗಿರದೆ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಇಂದಿನ ಯುವ ಪೀಳಿಗೆಗೆ ವಿಶೇಷ ತರಬೇತಿಗಳ ಅಗತ್ಯವಿರುವುದನ್ನು ಮನಗೊಂಡು ಭವಿಷ್ಯದಲ್ಲಿ ವಿವಿಧ ಉದ್ಯೋಗಗಳನ್ನು ಪಡೆಯಲು ಬೇಕಾಗಿರುವ ಸಂದರ್ಶನಗಳನ್ನು ಎದುರಿಸುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ವಿವಿಧ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ವೈಕ್ತಿತ್ವದ ಬೆಳವಣಿಗೆಗಾಗಿ ವೈಕ್ತಿತ್ವ ವಿಕಸನದಂತಹ ತರಬೇತಿ ಹಾಗೂ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ವಿದ್ಯಾರ್ಥಿ ಕೌನ್ಸಲಿಂಗ್ ನಡೆಸಲಾಗುತ್ತದೆ.ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವರ್ಷದುದ್ದಕ್ಕೂ ಆಯೋಜನೆ ಮಾಡುವುದರ ಮೂಲಕ ಕ್ರೀಡೆ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ.

2022-2023ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ (ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ದಾಖಲಾತಿ ಆರಂಭಗೊಂಡಿದೆ.
ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳು: 8951371853, 9731488501, 6360574596, 9739789488, 9743289565

Admission Open for 1st & 2nd PUC ( Science, Commerce ) at Janatha Independent PU College Hemmady

ವಿಶೇಷ ಸೌಲಭ್ಯಗಳು:

ಇನ್ನಿತರ ಪ್ರಮುಖವಾದ ಸೌಲಭ್ಯಗಳೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಜ್ಞಾನಕೌಶಲ್ಯವನ್ನು ಗಟ್ಟಿಗೊಳಿಸಲು ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡುವ ಹೊಂಗನಸು ನನಸಾಗಲೆಂಬುದು ಸಂಸ್ಥೆಯ ಆಡಳಿತ ಮಂಡಳಿಯವರ ಕನಸಿನೊಂದಿಗೆ, ಶೈಕ್ಷಣಿಕ ಮಾರ್ಗದರ್ಶಕರಾದ ಚಿತ್ರಾ ಕಾರಂತರವರ ಸೂಕ್ತ ಮಾರ್ಗದರ್ಶನದಲ್ಲಿ,ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರ ಉತ್ತಮ ನಾಯಕತ್ವ ಗುಣ, ಕಾಲೇಜು ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಕಾಲೇಜನ್ನು ಉತ್ತಮ ಮಟ್ಟದಲ್ಲಿ ಮುನ್ನಡೆಯಲು ಯೋಜನೆಯನ್ನು ರೂಪಿಸಲಾಗಿದೆ.

2022-2023ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ (ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ದಾಖಲಾತಿ ಆರಂಭಗೊಂಡಿದೆ.
ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳು: 8951371853, 9731488501, 6360574596, 9739789488, 9743289565.

Admission Open for 1st & 2nd PUC ( Science, Commerce ) at Janatha Independent PU College Hemmady

ಈ ಮೇಲಿನ ವಿಷಯವನ್ನು ಕಾಲೇಜು ಆಡಳಿತ ಮಂಡಳಿಯ ಅಧೀಕೃತ ಪ್ರಕಟಣೆಯಂತೆ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸುವುದು.

Exit mobile version